ನಟನೆ ಜೊತೆಗೆ ಫಿಟ್ನೆಸ್ ನಿಂದಲೂ ಗುರುತಿಸಿಕೊಂಡ ಬಾಲಿವುಡ್ ಸ್ಟಾರ್ ನಟಿ, ಶಿಲ್ಪಾ ಶೆಟ್ಟಿ ಕಾಲು ಮುರಿದುಕೊಂಡಿದ್ದಾರೆ. ಚಿತ್ರೀಕರಣ ವೇಳೆ ಆಯತಪ್ಪಿ ಬಿದ್ದ ಶಿಲ್ಪಾ ಶೆಟ್ಟಿ ಕಾಲಿಗೆ ಬಲವಾದ ಏಟು ಬಿದ್ದಿದೆ. ಬಳಿಕ ತಕ್ಷಣ ಆಸ್ಪತ್ರೆಗೆ ಆಸ್ಪತ್ರೆಗೆ ಧಾವಿಸಿದ್ದು ಚಿಕಿತ್ಸೆ ಪಡೆದಿದ್ದಾರೆ.
ರೋಹಿತ್ ಶೆಟ್ಟಿ ನಿರ್ದೇಶನದ ‘ಇಂಡಿಯನ್ ಪೊಲೀಸ್ ಫೋರ್ಸ್’ ವೆಬ್ ಸೀರಿಸ್ ನಲ್ಲಿ ಶಿಲ್ಪಾ ನಟಿಸುತ್ತಿದ್ದಾರೆ.
ಈ ಸರಣಿಯ ಶೂಟಿಂಗ್ ವೇಳೆ ಕಾಲಿಗೆ ಪೆಟ್ಟಾಗಿದೆ ಎಂದು ಸ್ವತಹ ಶಿಲ್ಪಾ ಪೋಸ್ಟ್ ಹಾಕಿದ್ದು, ನಿರ್ದೇಶಕರು ರೋಲ್,ಕ್ಯಾಮರಾ,ಆ್ಯಕ್ಷನ್ ಎಂದರು. ನನ್ನ ಕಾಲು ಮುರಿಯಿತು.6 ವಾರ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದು ಕ್ಯಾಪ್ಯನ್ ನೀಡಿದ್ದಾರೆ. ಈ ವೆಬ್ ಸೀರಿಸ್ ನಲ್ಲಿ ಸಿದ್ಧಾರ್ಥ್ ಮಲ್ಹೋತ್ರ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಸಿನಿಮಾದ ಹೈ ವೋಲ್ಟೇಜ್ ಆಕ್ಷನ್ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು.
PublicNext
10/08/2022 06:43 pm