ವರಮಹಾಲಕ್ಷ್ಮಿ ಹಬ್ಬದಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹೊಸ ಚಿತ್ರದ ಮುಹೂರ್ತ ನೆರವೇರಿದೆ. ಕನಕಪುರದದ ರವಿಶಂಕರ್ ಗುರೂಜಿ ಆಶ್ರಮದಲ್ಲಿ ದರ್ಶನ್ 56ನೇ ಚಿತ್ರದ ಅದ್ಧೂರಿ ಮುಹೂರ್ತ ನಡೆದಿದೆ. ರಾಬರ್ಟ್ ಟೀಂ ಜೊತೆ ದರ್ಶನ್ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದು, ಚಿತ್ರದಲ್ಲಿ ನಟಿಯಾಗಿ 'ಕನಸಿನ ರಾಣಿ' ಮಾಲಾಶ್ರೀ ಪುತ್ರಿ ರಾಧನಾ ರಾಮ್ ಎಂಟ್ರಿಕೊಡುತ್ತಿದ್ದಾರೆ.
ಮೊದಲ ಸಿನಿಮಾದಲ್ಲೇ ದರ್ಶನ್ ಜೊತೆ ಮಾಲಾಶ್ರೀ ಮಗಳು ನಟಿಸುತ್ತಿದ್ದಾರೆ. ಇನ್ನು ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರಕ್ಕೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಬಗ್ಗೆ ರಾಧನಾ ರಾಮ್ ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
PublicNext
07/08/2022 12:14 pm