ಮುಂಬೈ: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರ ಈಗಾಗಲೇ ನಿರೀಕ್ಷೆಗೂ ಮೀರಿ ಸಕ್ಸಸ್ ಕಂಡಿದೆ. 2ಡಿ ಹಾಗೂ 3ಡಿ ತಂತ್ರಜ್ಞಾನದಲ್ಲಿ ಹಿರಿತೆರೆ ಮೇಲೆ ರಾರಾಜಿಸುತ್ತಿರುವ ಸಿನಿಮಾಗೆ ಅಂತಿಮವಾಗಿ ಪ್ರೇಕ್ಷಕ ಪ್ರಭುಗಳು ಒಕೆ ಎಂದಿದ್ದಾರೆ.
ಖ್ಯಾತ ಸಿನಿಮಾ ವಿಮರ್ಶಕ ತರಣ್ ಆದರ್ಶ್ ಕೂಡ ಸಿನಿಮಾ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿಂದಿ ಭಾಷೆಯಲ್ಲೂ ವಿಕ್ರಾಂತ್ ರೋಣ ಹವಾ ಕ್ರಿಯೇಟ್ ಮಾಡಿದೆ. ಇತ್ತೀಚೆಗೆ ಹಿಂದಿಗೆ ಡಬ್ ಆಗಿರುವ ಚಿತ್ರಗಳಿಗಿಂತ ವಿಕ್ರಾಂತ್ ರೋಣ ಚಿತ್ರ ಎಷ್ಟೋ ಬೆಟರ್ ಎಂದು ತರಣ್ ಆದರ್ಶ್ ಹೇಳಿದ್ದಾರೆ. ಚಿತ್ರ ಬಿಡುಗಡೆ ಆದ ಮೊದಲ ದಿನ ಗುರುವಾರ 1.11 ಕೋಟಿ ರೂ., ಶುಕ್ರವಾರ 93ಲಕ್ಷ, ಶನಿವಾರ 1.52 ಕೋಟಿ, ರವಿವಾರ 2.21 ಕೋಟಿ, ಸೋಮವಾರ 70 ಲಕ್ಷ, ಮಂಗಳವಾರ 66 ಲಕ್ಷ, ಬುಧವಾರ 57 ಲಕ್ಷ, ಗುರುವಾರ 44 ಲಕ್ಷ..ಹಿಂದಿ ಬಾಷೆಯಲ್ಲಿ ವಿಕ್ರಾಂತ್ ರೋಣನ ಗುರುವಾರದವರೆಗಿನ ಕಲೆಕ್ಷನ್ 8 ಕೋಟಿ 14 ಲಕ್ಷ ರೂ. ಎಂದು ತರಣ ಆದರ್ಶ್ ಮಾಹಿತಿ ನೀಡಿದ್ದಾರೆ.
PublicNext
06/08/2022 05:37 pm