ನಟಿ ಶಮಿತಾ ಶೆಟ್ಟಿ ಅವರು ತಮ್ಮ ಇನ್ ಸ್ಟಾಗ್ರಾಮ್ ಸ್ಟೋರಿಗಳಲ್ಲಿ ತಾವು ಮತ್ತು ನಟ ರಾಕೇಶ್ ಬಾಪಟ್ ದೂರವಾಗುವ ಬಗ್ಗೆ ಖಚಿತಪಡಿಸಿದ್ದಾರೆ.
ಹೌದು ಬಹುಕಾಲ ಪ್ರೀತಿಯಲ್ಲಿದ್ದ ತಾರಾ ಜೋಡಿಯ ಬ್ರೇಕಪ್ ಬಾಲಿವುಡ್ ಅಂಗಳದಲ್ಲಿ ಸುದ್ದಿಯಾಗಿದೆ. ‘ಬೀಗ್ ಬಾಸ್’ ಮನೆಯೊಳಗೆ ಪ್ರೀತಿಯಲ್ಲಿ ಬಿದ್ದಿದ್ದ ನಟಿ ಶಮಿತಾ ಶೆಟ್ಟಿ ಮತ್ತು ನಟ ರಾಕೇಶ್ ಬಾಪಟ್ ಬೇರ್ಪಟ್ಟಿದ್ದಾರೆ.
"ಇದನ್ನು ಸ್ಪಷ್ಟಪಡಿಸುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ ... ರಾಕೇಶ್ ಮತ್ತು ನಾನು ಇನ್ನು ಮುಂದೆ ಒಟ್ಟಿಗೆ ಇರಲ್ಲ” ಎಂದು ಅವರು ಬರೆದಿದ್ದಾರೆ. ಇನ್ ಸ್ಟಾದಲ್ಲಿ ಬರೆದಿದ್ದಾರೆ. ಹಾಗೆಯೇ ಪ್ರೀತಿ ಬೆಂಬಲವನ್ನು ನೀಡಿದ ಎಲ್ಲಾ ಅಭಿಮಾನಿಗಳಿಗೆ ಥ್ಯಾಂಕ್ಯೂ ಎಂದಿದ್ದಾರೆ.
PublicNext
26/07/2022 09:48 pm