ನಟಿಯಾಗಿ, ಮಾಡೆಲ್ ಆಗಿ, ಉದ್ಯಮಿಯಾಗಿಯೂ ಫೇಮಸ್ ಆಗಿರುವ ಕಿಮ್ ಕರ್ದಾಶಿಯಾನ್ ಸಿಕ್ಕಾಪಟ್ಟೆ ಹಾಟ್ ಅವತಾರದಲ್ಲಿ ಗಮನ ಸೆಳೆಯುತ್ತಿದ್ದಾರೆ.ಹಲವು ಯುವತಿಯರಿಗೆ ಕಿಮ್ ಕರ್ದಾಶಿಯಾನ್ ಎಂದರೆ ಸ್ಫೂರ್ತಿ. ಅವರ ರೀತಿಯೇ ಕಾಣಬೇಕೆಂದು ಯುವತಿ ಮಾಡಿದ ಸರ್ಕಸ್ ಅಷ್ಟಿಷ್ಟಲ್ಲ.
ಹೌದು ಜೆನಿಫರ್ ಪಂಪ್ಲೋನಾ ಎಂಬ ಮಾಡೆಲ್ 4.7 ಕೋಟಿ ರೂಪಾಯಿ ಖರ್ಚು ಮಾಡಿ 40 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಕಿಮ್ ಕರ್ದಾಶಿಯಾನ್ ರೀತಿ ಕಾಣಲು ಆರಂಭಿಸಿದರು. ಆದರೆ ಅವರಿಗೆ ಈಗ ಆ ಲುಕ್ ಇಷ್ಟ ಆಗುತ್ತಿಲ್ಲ. ಎಲ್ಲರೂ ತಮ್ಮನ್ನು ಕಿಮ್ ಕರ್ದಾಶಿಯಾನ್ ಎಂದು ಕರೆಯಲು ಶುರು ಮಾಡಿದ್ದರಿಂದ ಅವರಿಗೆ ಕಿರಿಕಿರಿ ಎನಿಸತೊಡಗಿತು. ಹಾಗಾಗಿ ತಾವು ಮತ್ತೆ ಮೊದಲಿನಂತೆ ಕಾಣಬೇಕು ಎಂದು ಪುನಃ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗುತ್ತಿದ್ದಾರೆ.
ಸದ್ಯ ಅಸಲಿ ರೂಪಕ್ಕೆ ಬರಲು ಅಂದಾಜು ಒಂದು ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದಾರೆ 29 ವರ್ಷದ ಜೆನಿಫರ್ ಪಂಪ್ಲೋನಾ.
ಸತತ 12 ವರ್ಷಗಳ ಕಾಲ ಅವರು 40 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡರು. ದೇಹದ ವಿವಿಧ ಅಂಗಗಳಿಗೆ ಆಪರೇಷನ್ ಮಾಡಲಾಯಿತು.ಜೆನಿಫರ್ ಪಂಪ್ಲೋನಾಗೆ ಈಗ ಮೂಲ ರೂಪದ ಮೌಲ್ಯ ಅರಿವಾಗಿದ್ದು ವಿಪರ್ಯಾಸ.
PublicNext
12/07/2022 08:35 pm