ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬದುಕಲು ಹಣ ಬೇಕಲ್ವಾ ಸರ್? ಅದನ್ನೇ ಆಸೆ ಅಂದ್ರೆ ಏನು ಹೇಳ್ಬೇಕು?: ಪವಿತ್ರಾ ಲೋಕೇಶ್

ಬೆಂಗಳೂರು: ಕೇವಲ ಹಣಕ್ಕಾಗಿ ನಾನು ಸುಚೇಂದ್ರ ಪ್ರಸಾದ್​ ಜೊತೆ ಇದ್ದಿರಲಿಲ್ಲ. ಅವರು ಒಳ್ಳೆಯ ಮನುಷ್ಯ. ನಾವು ಮದುವೆ ಆದಾಗ ಅವರ ಬಳಿ ಹಣ ಇರಲಿಲ್ಲ, ಮನೆ ಇರಲಿಲ್ಲ, ಕಾರು ಇರಲಿಲ್ಲ. ಆದರೂ ಅವರೊಂದಿಗೆ ನಾನು 11 ವರ್ಷ ಇದ್ದೆ. ಈಗ ಕಳೆದ ಆರು ವರ್ಷಗಳಿಂದ ಅವರೊಂದಿಗೆ ಇಲ್ಲ. ಈಗಲೂ ನಮ್ಮಿಬ್ಬರ ನಡುವೆ ಒಳ್ಳೆಯ ಫ್ರೆಂಡ್‌ಶಿಪ್ ಇದೆ ಎಂದು ನಟಿ ಪವಿತ್ರಾ ಲೋಕೇಶ್ ಹೇಳಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಗೌರವದಿಂದ ಜೀವನ ನಡೆಸಲು ಹಣ ಬೇಕಲ್ವಾ ಸರ್? ಅದನ್ನೇ ಆಸೆ ಅಂದುಕೊಂಡ್ರೆ ನಾನೇನೂ ಹೇಳೋಕಾಗಲ್ಲ. ನರೇಶ್​ ನೂರಕ್ಕೂ ಹೆಚ್ಚು ಸಿನ್ಮಾ ಮಾಡಿದ್ದಾರೆ. ಸಾಕಷ್ಟು ನಟಿಯರ ಜೊತೆ ಕೆಲಸ ಮಾಡಿದ್ದಾರೆ. ಅಂದ ಮಾತ್ರಕ್ಕೆ ಅವರೆಲ್ಲರ ಜೊತೆ ಸಂಬಂಧ ಕಟ್ಟೋಕಾಗುತ್ತಾ? ಅದರಂತೆ ನಾನು ಕೂಡ ಹಲವು ನಟರ ಜೊತೆ ಅಭಿನಯಿಸಿದ್ದೀನಿ. ಹಾಗಂತ, ಎಲ್ಲರ ಜೊತೆ ಸಂಬಂಧ ಕಟ್ಟೋಕಾಗುತ್ತಾ?

ನರೇಶ್ ಪರಿಚಯ ಆದಾಗ ಅವರು ಸ್ಟಾರ್​ ಮಗ ಅನ್ನೋದೆ ನಂಗೆ ಗೊತ್ತಿರಲಿಲ್ಲ. ಒಟ್ಟೊಟ್ಟಿಗೆ ಕೆಲಸ ಮಾಡುತ್ತ ಕ್ಲೋಸ್​ ಆಗಿದ್ದೇವೆ. ಒಬ್ಬರಿಗೊಬ್ಬರು ಶೇರ್​ ಮಾಡ್ಕೊಳ್ಳುತ್ತಿದ್ದೆವು. ನರೇಶ್​ ಅವರು ಮನೇಲಿ ಯಾರೂ ಇಲ್ಲ ಅಂತ, ನನ್ ಹತ್ರ ಹೇಳುತ್ತಿದ್ದರು. ಮಾ ಸಂಸ್ಥೆ ಅಧ್ಯಕ್ಷರಾದ ಅವರು ಬೇರೆಯವರ ಸಮಸ್ಯೆ ಬಗೆಹರಿಸುತ್ತಾರೆ. ಒಂದು ದೊಡ್ಡ ಸ್ಥಾನದಲ್ಲಿರುವ ವ್ಯಕ್ತಿ ನನ್ನನ್ನು ಕೈ ಬಿಡಲ್ಲ ಸರ್ ಎಂದು ನಟಿ ಪವಿತ್ರ ಲೋಕೇಶ್ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪವಿತ್ರಾ ಲೋಕೇಶ್ ಅವಹೇಳನ ವಿಚಾರವಾಗಿ ಮಾತನಾಡಿದ ನಾನು ಸೈಬರ್ ಕ್ರೈಂಗೆ ಕಂಪ್ಲೇಂಟ್​ ಕೊಟ್ಟಿದೀನಿ. ನನಗೆ ಇದ್ರ ಬಗ್ಗೆ ಏನ್ ಮಾಡ್ಬೇಕು ಗೊತ್ತಾಗ್ತಿಲ್ಲ. ಅನವಶ್ಯಕವಾಗಿ ನನ್ ಬಗ್ಗೆ ಆರೋಪ ಹೊರಿಸುತ್ತಿದ್ದಾರೆ. ನರೇಶ್​ ಪತ್ನಿ ಅಂದ್ರೆ ಯಾರು ಸರ್? ನಂಗೆ ಅವರು ಯಾರು ಎಂಬುದೇ ಗೊತ್ತಿಲ್ಲ. ನಾನಂತೂ ಅವರನ್ನು ನೋಡೇ ಇಲ್ಲ. ಸುಮ್ಮನೇ ಅವರು ನರೇಶ್ ಪತ್ನಿ ಎಂದು ಹೇಳುತ್ತಿದ್ದಾರೆ ಎಂದು ಪವಿತ್ರಾ ಲೋಕೇಶ್ ಹೇಳಿದ್ದಾರೆ.

Edited By : Shivu K
PublicNext

PublicNext

02/07/2022 10:45 am

Cinque Terre

94.34 K

Cinque Terre

4