ಬಾಲಿವುಡ್ ಬೆಡಗಿ ಕೃತಿ ಸನನ್ ಯಾರಿಗೆ ತಾನೇ ಗೊತ್ತಿಲ್ಲ. ಅವರೆಂದರೆ ಬಹಳ ಜನರಿಗೆ ಇಷ್ಟ. ಅವರು ಇತ್ತೀಚಿನ ತಮ್ಮ ಫೋಟೋಶೂಟ್‌ನ ವಿಡಿಯೋ ಹಾಗೂ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ನಟಿ ಕೃತಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.
ಕೃತಿ ಸನೋನ್ ಅವರ ಈ ಸೀರೆಯನ್ನು ಫಲ್ಗುಣಿ ಶೆನ್ ವಿನ್ಯಾಸಗೊಳಿಸಿದ್ದಾರೆ. ಅವರ ಧರಿಸಿರುವ ಮಿನುಗು ಗೋಲ್ಡನ್ ಸೀರೆಯು ಹರಳಿನ ಮಣಿಗಳಿಂದ ಕೂಡಿದೆ. ನಟಿ ಸೀರೆಗೆ ಹೊಂದಿಕೆಯಾಗುವ ಹರಳಿನ ಅಲಂಕರಣದ ಕುಪ್ಪಸವನ್ನು ಧರಿಸಿದ್ದಾರೆ.
ಕೃತಿ ಸನೋನ್ ಸ್ವಲ್ಪ ಮೇಕಪ್ ಮಾಡಿಕೊಂಡಿದ್ದು, ಮುಖ ಸಹಜ ಎಂಬಂತೆ ಗೋಚರಿಸುತ್ತದೆ. ಕೀರ್ತಿ ಸನೋನ್ ಉಂಗುರಗಳು ಮತ್ತು ಕಿವಿಯೋಲೆಗಳೊಂದಿಗೆ ತಮ್ಮ ಲುಕ್ನ್ನು ಪೂರ್ಣಗೊಳಿಸಿದ್ದಾರೆ. ಈ ಪರಿಕರಗಳು ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತಿವೆ.
PublicNext
29/06/2022 06:19 pm