ನಾಗ ಚೈತನ್ಯ ಅವರ ವಿಚ್ಛೇದನದ ನಂತರ, ಚಲನಚಿತ್ರಗಳ ವಿಷಯದಲ್ಲಿ ಹೆಚ್ಚಾಗಿ ಆಸಕ್ತಿ ತೋರುತ್ತಿರುವ ನಟಿ ಸಮಂತಾ ಐಟಂ ಸಾಂಗ್ ಗಳ ಮೂಲಕ ಸಖತ್ ಹವಾ ಮಾಡುತ್ತಿದ್ದಾರೆ.`ಪುಷ್ಪ’ ಚಿತ್ರದಲ್ಲಿ ಐಟಂ ಹಾಡಿಗೆ ಸೊಂಟ ಬಳುಕಿಸಿದ ಬಳಿಕ ಸಮಂತಾ ಬೇಡಿಕೆ ಹೆಚ್ಚಾಗಿದೆ.
ಸದ್ಯ ರಣ್ ಬೀರ್ ಕಪೂರ್ ಸಿನಿಮಾಗೆ ಹೆಜ್ಜೆ ಹಾಕಲು ಸಮಂತಾರನ್ನು ಚಿತ್ರತಂಡ ಕೇಳಲಾಗಿದೆಯಂತೆ. `ಪುಷ್ಪ’ ಚಿತ್ರದಲ್ಲಿ ಸಮಂತಾ ಬೋಲ್ಡ್ ನೆಸ್ ನೋಡಿ ಫ್ಯಾನ್ಸ್ ಫಿದಾ ಅಗಿದ್ದಾರೆ. ಈಗ ಸಮಂತಾ ಟ್ಯಾಲೆಂಟ್ ಜತೆ ಆಕೆಯ ಮೇಲಿರುವ ಕ್ರೇಜ್ ನೋಡಿ ರಣ್ ಬೀರ್ ಮತ್ತು ರಶ್ಮಿಕಾ ನಟನೆಯ `ಅನಿಮಲ್’ ಚಿತ್ರತಂಡ ಮತ್ತೆ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಲು ಆಫರ್ ನೀಡಿದೆ.
ಇನ್ನು ರಣ್ಬೀರ್ ನಟನೆಯ ಸಿನಿಮಾಗೆ ಸಮಂತಾ ಗ್ರೀನ್ ಸಿಗ್ನಲ್ ಕೊಡುತ್ತಾರಾ ಅಂತಾ ಕಾದುನೋಡಬೇಕಿದೆ.
PublicNext
29/06/2022 04:31 pm