ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತ್ರಿವಿಕ್ರಮ ಪ್ರಮೋಷನ್ ಗೆ ದಾವಣಗೆರೆ ಬಂದ ಸಿನಿಮಾ ತಂಡ: ಕುಣಿದು ಕುಪ್ಪಳಿಸಿದ ವಿದ್ಯಾರ್ಥಿನಿಯರು..!

ದಾವಣಗೆರೆ: ಇದೇ ಜೂನ್ 24ಕ್ಕೆ ರಾಜ್ಯಾದ್ಯಂತ ತೆರೆಕಾಣಲಿರುವ ಕ್ರೇಜಿಸ್ಚಾರ್ ರವಿಚಂದ್ರನ್ ಪುತ್ರ ವಿಕ್ರಮ ರವಿಚಂದ್ರನ್ ಅಭಿನಯದ ತ್ರಿವಿಕ್ರಮ ಸಿನಿಮಾದ ಪ್ರಮೋಷನ್ ಗಾಗಿ ಚಿತ್ರತಂಡ ಬೆಣ್ಣೆನಗರಿಗೆ ಆಗಮಿಸಿತ್ತು. ನಗರದ ದವನ್ - ನೂತನ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮುಂದೆ ಚಿತ್ರತಂಡ ನೃತ್ಯ ಮಾಡುವ ಮೂಲಕ ರಂಜಿಸಿದರು.

ನಗರದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನಕ್ಕೆ ತೆರಳಿದ ಚಿತ್ರತಂಡವು ತಾಯಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಚಿತ್ರತಂಡವು ಸಿನಿಮಾ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿತು. ಜಿಎಂಐಟಿ, ಅಥಣಿ ಕಾಲೇಜು, ಎವಿ ಕಮಲಮ್ಮ ಮಹಿಳಾ ಕಾಲೇಜು, ಜೈನ್ ತಾಂತ್ರಿಕ ಕಾಲೇಜುಗಳಲ್ಲಿ ಹೋಗಿ ವಿದ್ಯಾರ್ಥಿಗಳ ಸಮೂಹದ ನಡುವೆ ಚಿತ್ರ ಬೆಂಬಲಿಸುವಂತೆ ಮನವಿ ಮಾಡಿತು.

ದವನ್ - ನೂತನ್ ಕಾಲೇಜಿನಲ್ಲಿ ಅಲಲಾ ಲಾ ಅಲಲಾ ನಿನ್ನ ಮುಂದೆ ಯಾರೂ ಇಲ್ಲ. ಎಲ್ಲಾ ನಿಂದೆ ನಂದೇನಿಲ್ಲ. ಆಗು ಗಲ್ಲಿ ಹಲ್ಲಾ ಗುಲ್ಲಾ ಶಕುಂತಲಾ ಶೇಕ್ ಯುವರ್ ಬಾಡಿ ಎಂಬ ಹಾಡಿಗೆ ತ್ರಿವಿಕ್ರಮ ರವಿಚಂದ್ರನ್ ಹಾಗೂ ಚಿತ್ರದ ನಾಯಕಿ ಆಕಾಂಕ್ಷಾ ಶರ್ಮಾ ಹೆಜ್ಜೆ ಹಾಕುತ್ತಿದ್ದಂತೆ ವಿದ್ಯಾರ್ಥಿನಿಯರು ಕುಣಿದು ಕುಪ್ಪಳಿಸಿದರು. ಈ ವೇಳೆ ನಟ, ನಟಿಯರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ರವಿಚಂದ್ರನ್ ಪುತ್ರನನ್ನು ಕಂಡು ಪುಳಕಿತರಾದರು.

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತ್ರಿವಿಕ್ರಮ ರವಿಚಂದ್ರನ್, ನನ್ನ ತಂದೆ ಮೊದಲ ಸಿನಿಮಾದ ಆಡಿಯೋ ಇಲ್ಲೇ ಬಿಡುಗಡೆಯಾಗಿದ್ದು. ಆಗಿನಿಂದ ಇಲ್ಲಿಯವರೆಗೆ ದಾವಣಗೆರೆಯ ಜನರು ನನ್ನ ತಂದೆ ಮೇಲೆ ಅಪಾರ ಪ್ರೀತಿ, ವಿಶ್ವಾಸ ತೋರಿಸಿದ್ದಾರೆ. ಅವರ ಚಿತ್ರಗಳನ್ನು ಪ್ರೋತ್ಸಾಹಿಸಿದ್ದಾರೆ. ನನಗೂ ಇದರಲ್ಲಿ ಶೇಕಡಾ 1ರಷ್ಟಾದರೂ ನೀಡಿ. ಮೊದಲಿನಿಂದಲೂ ನಮ್ಮ ಕುಟುಂಬದ ಮೇಲೆ ತೋರಿರುವ ಪ್ರೀತಿ ಮುಂದೆಯೂ ಮುಂದುವರಿಯುತ್ತದೆ ಎಂದು ಹೇಳಿದರು.

Edited By : Nagesh Gaonkar
PublicNext

PublicNext

13/06/2022 09:54 pm

Cinque Terre

44.34 K

Cinque Terre

1