ಗಾಂಧಿನಗರ: ನುಡಿದಂತೆ ನಡೆದುಕೊಂಡ ಬಾಲಿವುಡ್ ನಟ ಸೋನು ಸೂದ್ ಮತ್ತೊಮ್ಮೆ ರಿಯಲ್ ಹೀರೋ ಅನಿಸಿಕೊಂಡಿದ್ದಾರೆ.
ಹೌದು. ಸೋನು ಸೂದ್ ಅವರ ಸಹಾಯದಿಂದ ಗುಜರಾತ್‌ನ ವಿಶಿಷ್ಟ ಮಗು ಅಂತಿಮವಾಗಿ ಸಾಮಾನ್ಯ ಜೀವನ ನಡೆಸಲು ಮುಂದಾಗಿದೆ. ಈ ಮೂಲಕ ಸೋನು ಸೂದ್ ಅವರಿಗೆ ಎಲ್ಲೆಡೆಯಿಂದ ಧನ್ಯವಾದ ಸಮರ್ಪಣೆ ಆಗುತ್ತಿದೆ.
ನವಡಾ ಜಿಲ್ಲೆಯ ಸೋರ್ ಪಂಚಾಯತ್‌ನ ವರ್ಸಲಿಗಂಜ್ ಬ್ಲಾಕ್‌ನ ಮಗುವಿಗೆ ಹುಟ್ಟಿನಿಂದಲೇ ನಾಲ್ಕು ಕೈ ಮತ್ತು ನಾಲ್ಕು ಕಾಲುಗಳಿದ್ದವು. ಈ ಮಗು ಸೋನು ಸೂದ್ ಕಣ್ಣಿಗೆ ಬಿದ್ದಿತ್ತು. ಬಾಲಕಿಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಬಾಲಕಿಗೆ ಶಸ್ತ್ರಚಿಕಿತ್ಸೆ ಮಾಡಿಸುವುದಾಗಿ ಅಂದೇ ನಟ ಸೋನು ಸೂದ್ ಘೋಷಿಸಿದ್ದರು. ಅಂತೆಯೇ ಹೇಳಿದಂತೆ ನಡೆದುಕೊಂಡಿದ್ದಾರೆ.
ಬಾಲಕಿಗೆ ಸೂರತ್‌ನ ಕಿರಣ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕಿರಣ್ ಆಸ್ಪತ್ರೆಯ ನುರಿತ ವೈದ್ಯರು ಹಲವಾರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ವೈದ್ಯರ ಕಠಿಣ ಪರಿಶ್ರಮ ಮತ್ತು ಸೋನು ಸೂದ್ ಅವರ ನೆರವಿನಿಂದ ಎರಡೂವರೆ ವರ್ಷದ ಬಾಲಕಿ ಸಹಜ ಜೀವನ ನಡೆಸಲು ಸಾಧ್ಯವಾಗಿದೆ.
PublicNext
10/06/2022 09:58 am