ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ನಿಧನರಾಗಿ ಇಂದಿಗೆ(ಜೂನ್ 7) 2 ವರ್ಷವಾಗಿದೆ. ಎರಡು ವರ್ಷದ ಹಿಂದೆ ಇದೇ ದಿನ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಚಿರು ಚಿರನಿದ್ರೆಗೆ ಜಾರಿ ಅವರ ಕುಟುಂಬದವರನ್ನು, ಅಭಿಮಾನಿಗಳನ್ನು ದುಃಖದ ಸಾಗರದಲ್ಲಿ ಮುಳುಗಿಸಿದ್ದರು.
ಅವರಿಲ್ಲದೇ ಇಂದಿಗೆ 2 ವರ್ಷ. ಮುದ್ದಾದ ಸಂಸಾರದ ಕನಸನ್ನು ಹೊಂದಿದ್ದ ಚಿರು ನೆನಪು ಇಂದಿಗೂ ಅಜರಾಮರ. ವಾಯುಪುತ್ರ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಚಿರು ನಂತರ ಸಾಲು ಸಾಲು ಚಿತ್ರಗಳ ಮೂಲಕ ಜನರಿಗೆ ಹತ್ತಿರವಾಗುತ್ತಾ ಹೋದರು. ಅವರೆಂದರೆ ಜನರಿಗೆ ಅದೇನೋ ಪ್ರೀತಿ, ವಿಶ್ವಾಸ.
ಚಿರು ಸರ್ಜಾ ಅವರ ನೆನಪಿನಲ್ಲಿ ಇಂದಿಗೂ ಅಭಿಮಾನಿಗಳಿದ್ದು, ಆಗಾಗ ಅಗಲಿದ ನಟನ ನೆನಪಿಗಾಗಿ ಸಾಮಾಜಿಕಾ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಇನ್ನು ಚಿರು ಅವರ ಮುದ್ದಾದ ಮಗ ರಾಯನ್ ಗೆ ಅಭಿಮಾನಿಗಳು ಪ್ರೀತಿಯಿಂದ ಜೂನಿಯರ್ ಚಿರಂಜೀವಿ ಸರ್ಜಾ ಎನ್ನುತ್ತಾರೆ.
PublicNext
07/06/2022 11:24 am