ಡಿವೋರ್ಸ್ ನಂತರ ಸ್ಯಾಮ್ ಲುಕ್ ಮತ್ತು ಲಕ್ ಎರಡು ಬದಲಾಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವುದರ ಜತೆಗೆ ಆಗಾಗ ಬೋಲ್ಡ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಡುತ್ತಿರುತ್ತಾರೆ. ತಮ್ಮ ಹೊಸ ಫೋಟೋಶೂಟ್ ನಿಂದ ಸದ್ಯ ಪಡ್ಡೆಹುಡುಗರ ಟೆಂಪ್ರೇಚರ್ ಹೆಚ್ಚಿಸಿದ್ದಾರೆ.
ಹೌದು ದಕ್ಷಿಣ ಭಾರತದ ಬ್ಯೂಟಿ ಸಮಂತಾಪತಿ ನಾಗಚೈತನ್ಯ ಜತೆಗಿನ ದಾಂಪತ್ಯ ಜೀವನಕ್ಕೆ ಎಳ್ಳು ನೀರು ಬಿಟ್ಟ ಮೇಲೆ ಮತ್ತಷ್ಟು ಸ್ಟ್ರಾಂಗ್ ಮತ್ತು ಬೋಲ್ಡ್ ಆಗಿದ್ದಾರೆ.
ಪುಷ್ಪ ಚಿತ್ರದ ಹಾಡಿಗೆ ಹಾಟ್ ಆಗಿ ಕಾಣಿಸಿಕೊಂಡು ಸೊಂಟ ಬಳುಕಿಸಿ ಬಳಿಕ ಈಗ ಬಾಲಿವುಡ್, ಹಾಲಿವುಡ್ ಎಲ್ಲಾ ರಂಗದಲ್ಲೂ ಸಮಂತಾ ಬುಲಾವ್ ಬರುತ್ತಿದೆ. ಇದೀಗ ಮತ್ತೊಮ್ಮೆ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ನ್ಯೂ ಲುಕ್ಕಿನಿಂದ ಪಡ್ಡೆಹುಡುಗರ ಟೆಂಪ್ರೇಚರ್ ಹೆಚ್ಚಿಸಿದ ಬ್ಯೂಟಿ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
PublicNext
06/06/2022 10:52 pm