ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲೈಂಗಿಕ ಕಾರ್ಯಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ನಟಿ ಸೋನು ಗೌಡ

ನಾಜೂಕ ನೋಟ, ನೀಳ ಕಾಯ, ಸೇವಂತಿಗೆಯಂತಹ ನಗುಮುಖ ಹೊಂಡಿರುವ ಚೆಲವೆ ನಟಿ ನಟಿ ಸೋನು ಗೌಡ ಇನ್ಮುಂದೆ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗುಳ್ಟು, ಯುವರತ್ನ ಸೇರಿದಂತೆ ಇಂತಿ ನಿನ್ನ ಪ್ರೀತಿಯ ಸಿನಿಮಾಗಳಲ್ಲಿ ಹವಾ ಸೃಷ್ಟಿಸಿಕೊಂಡಿದ್ದ ನಟ ಸೋನುಗೌಡ ತಮ್ಮ ಮುಂದಿನ ಚಿತ್ರದಲ್ಲಿ ಲೈಂಗಿಕ ಕಾರ್ಯಕರ್ತೆ ಆಗಲಿದ್ದಾರೆ.

ಇದು ಚಾಲೆಂಜಿಂಗ್ ಎನಿಸಿದರೂ ಪಾತ್ರದಲ್ಲಿ ನಟಿಸಲು ಸೋನು ಗೌಡ ಒಪ್ಪಿಕೊಂಡಿದ್ದಾರೆ. ಬಹುಭಾಷಾ ನಟಿ ಸೋನು ಗೌಡ ಇದುವರೆಗೂ ಲವ್ ಸ್ಟೋರಿ, ಥ್ರಿಲ್ಲರ್, ಸಾಮಾಜಿಕ ಕಳಕಳಿಯ ಚಿತ್ರ ಹೀಗೆ ಹಲವು ಸಿನಿಮಾಗಳಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈಗ ಯುವಧೀರ ನಿರ್ದೇಶನದ `ಗುಡ್ ಗುಡ್ಡರ್ ಗುಡ್ಡೆಸ್ಟ್’ ಚಿತ್ರದಲ್ಲಿ ಲೈಂಗಿಕ ಕಾರ್ಯಕರ್ತೆ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇನ್ನು ಸೋನು ಅವರನ್ನು ಹೊಸ ಬಗೆಯ ಪಾತ್ರದಲ್ಲಿ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.

Edited By : Nagaraj Tulugeri
PublicNext

PublicNext

06/06/2022 04:40 pm

Cinque Terre

47.17 K

Cinque Terre

0