ಮುಂಬೈ: ಬಾಲಿವುಡ್ ನಾಯಕ ನಟ ಆಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಚಿತ್ರದ ಟ್ರೈಲರ್ ನಿಜಕ್ಕೂ ವಿಶೇಷವಾಗಿಯೇ ಇದೆ. ಎಂತಹ ಮಕ್ಕಳೂ ಏನೆಲ್ಲ ಆಗಬಹುದು ಅನ್ನೋ ರೀತಿಯಲ್ಲಿಯೇ ಈ ಚಿತ್ರ ಇದ್ದಂತೆ ಕಾಣುತ್ತದೆ.
ನಿಜ,ಆಮೀರ್ ಖಾನ್ ಅಂದ್ರೆನೇ ಹಾಗೆ. ಒಳ್ಳೆ ಕಥೆಯೊಂದಿಗೇನೆ ಆಮೀರ್ ಬರೋದು. ಲಾಲ್ ಸಿಂಗ್ ಚಡ್ಡಾ ಕೂಡ ಅಂತಹದ್ದೆ ಒಂದು ವಿಶೇಷ ಕಥೆಯ ಚಿತ್ರ ಎಂಬೋದನ್ನ ಚಿತ್ರದ ಟ್ರೈಲರ್ ಈಗಲೇ ಹೇಳ್ತಿದೆ.
ಅದ್ವೈತ್ ಚಂದನ್ ನಿರ್ದೇಶನದ ಈ ಚಿತ್ರವನ್ನ ಸ್ವತಃ ಆಮೀರ್ ಖಾನ್ ನಿರ್ಮಿಸುತ್ತಿದ್ದು, ಚಿತ್ರದ ಪ್ರಮುಖ ಲಾಲ್ ಸಿಂಗ್ ಚಡ್ಡಾ ಪಾತ್ರದಲ್ಲೂ ವಿಶೇಷವಾಗಿಯೇ ಆಮೀರ್ ಕಾಣಿಸುತ್ತಿದ್ದಾರೆ. ಬರೋ ಆಗಸ್ಟ್-11 ರಂದು ಸಿನಿಮಾ ರಿಲೀಸ್ ಆಗುತ್ತಿದೆ.
PublicNext
31/05/2022 05:29 pm