ಬೆಂಗಳೂರು: ಸ್ಯಾಂಡಲ್‌ವುಡ್‌ನ ನಾಯಕ ನಟ ಜಯರಾಮ್ ಕಾರ್ತಿಕ್ (ಜೆಕೆ) ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಸೂಪರ್ ಸ್ಟಾರ್ ಆಗಿ ಕಂಗೊಳಿಸಿದ್ದ ಜೆಕೆ,ಜೀವನದಲ್ಲೂ "ಹೆಂಡ್ತಿ" ಆಗಮನ ಆಗುತ್ತಿದೆ.
ಜೆಕೆ ಬಾಳಿಗೆ ಕಾಲಿಡ್ತಿರೋ ಹುಡುಗಿ ಬೇರೆ ಯಾರೋ ಅಲ್ಲ. ಫ್ಯಾಷನ್ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಿರೋ ಅಪರ್ಣಾ. ಇವ್ರು ಹೆಸರಾಂತ ಫ್ಯಾಷನ್ ಡಿಸೈನರ್.
ತಮ್ಮ ಈ ಭಾವಿ ಪತ್ನಿ ಬಗ್ಗೆ ಜೆಕೆ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲೂ ಹೇಳಿಕೊಂಡಿದ್ದಾರೆ. ಆದರೆ, ಮದುವೆ ದಿನದ ಬಗ್ಗೆಇನ್ನೂ ಯಾವುದೇ ರೀತಿಯ ಮಾಹಿತಿಯನ್ನ ಬಿಟ್ಟುಕೊಟ್ಟಿಲ್ಲ. ಸದ್ಯಕ್ಕೆ ಬಾಳ ಸಂಗಾತಿಯನ್ನ ಜೆಕೆ ಎಲ್ಲರಿಗೂ ಪರಿಚಯಿಸಿದ್ದಾರೆ.
PublicNext
30/05/2022 04:51 pm