ಬೆಂಗಳೂರು:ಕೆಜಿಎಫ್ ಚಿತ್ರದ ಡೈರೆಕ್ರ್ ಪ್ರಶಾಂತ್ ನೀಲ್ ನೆಕ್ಟ್ ಮೂವೀ ಯಾವುದು? ಈ ಪ್ರಶ್ನೆಗೆ ಹತ್ತು ಹಲವು ಗಾಸಿಪ್ ಗಳು ಹುಟ್ಟಿಕೊಂಡಿವೆ. ಇಂತಹ ಗಾಸಿಪ್‌ಗಳಲ್ಲಿ ಸ್ತ್ರೀ ಪ್ರಧಾನ ಸಿನಿಮಾ ಮಾಡ್ತಾರೆ ಅನ್ನೋ ಗಾಸಿಪ್ ಭಾರೀ ಚರ್ಚೆ ಕೂಡ ಆಗುತ್ತಿದೆ.
ಪ್ರಶಾಂತ್ ನೀಲ್ ಮುಂದಿನ ಸಿನಿಮಾ ಯಾವುದು ಅನ್ನೋ ಕುತೂಹಲ ಇದ್ದೇ ಇದೆ. ಈ ಕಾರಣಕ್ಕೇನೆ ಈ ಒಂದು ಚರ್ಚೆ ನಡೀತಾನೇ ಇದೆ. ಪ್ರಶಾಂತ್ ನೀಲ್ ಸ್ತ್ರೀ ಪ್ರಧಾನ ಚಿತ್ರ ಮಾಡ್ತಾರೋ ಇಲ್ವೋ ಗೊತ್ತಿಲ್ಲ.ಆದರೆ, ಕೆಜಿಎಫ್ ಚಿತ್ರದಲ್ಲಿ ಬರೋ ಶಾಂತಿ ಹೆಸರಿನ ಆ ಪುಟ್ಟ ಮಗುವಿನ ಸುತ್ರವೇ ಈಗ ಸಲಹೆ ರೂಪದಲ್ಲಿಯೇ ಗಾಸಿಪ್ ಹರಡುತ್ತಿವೆ.
ಕೆಜಿಎಫ್ ನಾಯಕ ರಾಕಿ ಭಾಯ್ ಸತ್ತನಂತರವೇ ಶಾಂತಿನೇ ಇಡೀ ನರಾಚಿಯನ್ನ ನೋಡಿಕೊಳ್ತಾಳೆ ಎಂದು ಕತೆ ಮಾಡಬಹುದು ಅನ್ನೋ ಅರ್ಥದಲ್ಲಿಯೇ ಈಗ ಹಲವು ಸಲಹೆ ಬರುತ್ತೀವೆ. ಆದರೆ, ಇದನ್ನ ಪ್ರಶಾಂತ್ ತೆಗೆದುಕೊಳ್ತಾರೋ ಇಲ್ಲವೋ ಗೊತ್ತಿಲ್ಲ. ಈ ಗಾಸಿಪ್ ಅಂತೂ ತುಂಬಾ ಇಂಟ್ರಸ್ಟಿಂಗ್ ಆಗಿಯೇ ಇದೆ.
PublicNext
29/05/2022 05:29 pm