ಖುಷಿ’ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿಕಾರು ಪಲ್ಟಿ ಆಗಿ ನಟಿ ಸಮಂತಾ ಹಾಗೂ ವಿಜಯ್ ದೇವರಕೊಂಡ ಗಾಯಗೊಂಡಿದ್ದಾರೆ.
ಕಾಶ್ಮೀರದಲ್ಲಿ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿರುವ ಮಧ್ಯೆ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರು ಚೇಸಿಂಗ್ ದೃಶ್ಯದ ಶೂಟಿಂಗ್ ಕಾಶ್ಮೀರದ ಪಹಲ್ ಗಮ್ ನಲ್ಲಿ ನಡೆಯುತ್ತಿತ್ತು. ಈ ವೇಳೆ ಕಾರು ದೊಡ್ಡ ಕೆರೆಯಲ್ಲಿ ಬಿದ್ದಿದೆ. ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರಿಂದ ಯಾವುದೇ ದೊಡ್ಡ ಮಟ್ಟದ ಸಮಸ್ಯೆ ಆಗಿಲ್ಲ ಎಂದು ವರದಿ ಆಗಿದೆ.ಕಾರು ನೀರಿಗೆ ಬೀಳುತ್ತಿದ್ದಂತೆ ಇಬ್ಬರನ್ನೂ ಹೊರ ತೆಗೆಯಲಾಗಿದೆ. ಚಿಕಿತ್ಸೆ ಕೂಡಾ ನೀಡಲಾಗಿದೆ.
ಈ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿತ್ತು. ವಿಜಯ್ ದೇವರಕೊಂಡ ಮತ್ತು ಸಮಂತಾ ಕಾಂಬಿನೇಷನ್ ಫ್ಯಾನ್ಸ್ ಗೆ ಇಷ್ಟವಾಗಿತ್ತು.
PublicNext
23/05/2022 10:01 pm