ಅರೆಬರೆ ಬಟ್ಟೆ ತೊಟ್ಟು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಕಿರುತೆರೆ ನಟಿ, ಮಾಡೆಲ್ ಉರ್ಫಿ ಜಾವೇದ್ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಾರೆ. ಆದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಉರ್ಫಿ ಪ್ರತಿ ಬಾರಿಯೂ ವಿಚಿತ್ರವಾಗಿಯೇ ದರ್ಶನ ನೀಡುತ್ತಾರೆ.
ಮುಂಬೈನ ಒಂದು ಕ್ಲಬ್‌ನಲ್ಲಿ ಉರ್ಫಿ ಪಾರ್ಟಿಯೊಂದನ್ನು ಆಯೋಜನೆ ಮಾಡಿದ್ದರು. ಈ ಪಾರ್ಟಿಯಲ್ಲಿ ರಾಖಿ ಸಾವಂತ್ ಕೂಡ ಕಾಣಿಸಿಕೊಂಡಿದ್ದರು. ಅಕ್ಷಿತ್ ಸುಖಿಜಾ, ಪ್ರಿಯಾಂಕ್ ಶರ್ಮಾ ಮತ್ತು ಇನ್ನು ಅನೇಕರು ಕಾಣಿಸಿಕೊಂಡಿದ್ದರು. ಈ ವೇಳೆ ಉರ್ಫಿ ಬಟ್ಟೆ ಎಲ್ಲರ ಗಮನ ಸೆಳೆಯಿತು. ಉರ್ಫಿ ಗ್ಲಾಸ್ ಪೀಸ್‌ಗಳನ್ನೇ ಬಟ್ಟೆಯಾಗಿ ಧರಿಸಿದ್ದರು. ಈ ಬಟ್ಟೆ ಬರೋಬ್ಬರಿ 20 ಕೆಜಿ ಇದೆಯಂತೆ. ಉರ್ಫಿಯ ಗ್ಲಾಸ್ ಬಟ್ಟೆ ನೋಡಿ ನೆಟ್ಟಿಗರು ಹೇಗೆ ಕುಳಿತುಕೊಳ್ಳುತ್ತೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಂದಹಾಗೆ ಪಾರ್ಟಿಯಲ್ಲಿ ಇದೇ ಬಟ್ಟೆ ಧರಿಸಿ ಡಾನ್ಸ್ ಕೂಡ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಗ್ಲಾಸ್ ಧರಿಸಿ ಹೇಗೆ ಓಡಾಡಿದರು ಎನ್ನುವುದು ಅಭಿಮಾನಿಗಳ ಕುತೂಹಲ ಆಗಿದೆ.
PublicNext
22/05/2022 06:41 pm