ಮುಂಬೈ: ಬಾಲಿವುಡ್ ಹಾಟ್ ನಟಿ ಮಲೈಕಾ ಅರೋರಾ ಸಿನಿಮಾಗಿಂತ ಹೆಚ್ಚಾಗಿ ಮಲೈಕಾ ಬೇರೆ ಬೇರೆ ವಿಚಾರಗಳ ಸದ್ದು ಮಾಡುತ್ತಿರುತ್ತಾರೆ. ಅದರಲ್ಲೂ ಮಲೈಕಾ ಕಳೆದ ಮೂರ್ನಾಲ್ಕು ವರ್ಷಗಳಿಂದ ಅರ್ಜುನ್ ಕಪೂರ್ ಜೊತೆಗಿನ ಪ್ರೀತಿ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಹಾಟ್ ಉಡುಗೆಗಳ ಮೂಲಕವೇ ಹೆಚ್ಚು ಗಮನ ಸೆಳೆಯುವ ಮಲೈಕಾ ಮದುವೆ ವಿಚಾರ ವೈರಲ್ ಆಗಿದೆ.
ಹೌದು. ಮಲೈಕಾ ಎರಡನೇ ಮದುವೆಗೆ ಸಿದ್ಧವಾಗಿದ್ದಾರೆ ಎನ್ನಲಾಗಿದೆ. ಮಲೈಕಾ ತನ್ನ ಪ್ರಿಯತಮ ಅರ್ಜುನ್ ಕಪೂರ್ ಜೊತೆ ಈ ವರ್ಷವೇ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಈ ಜೋಡಿ 2016ರಿಂದ ಡೇಟಿಂಗ್ ನಡೆಸುತ್ತಿದ್ದು, ಇದೀಗ ಮದುವೆಯಾಗುತ್ತಿದ್ದಾರಂತೆ. ನವೆಂಬರ್ ಇಲ್ಲವೇ ಡಿಸೆಂಬರ್ನಲ್ಲಿ ಇವರ ಮದುವೆ ಆಗಲಿದೆ ಎನ್ನಲಾಗಿದೆ.
ಅಂದಹಾಗೆ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ನಡುವಿನ ವಯಸ್ಸಿನ ಅಂತರ ಸಿಕ್ಕಾಪಟ್ಟೆ ಸ್ದದು ಮಾಡಿತ್ತು. ಮಲೈಕಾಗಿಂತ ಅರ್ಜುನ್ 12 ವರ್ಷಗಳ ಕಾಲ ಚಿಕ್ಕವರು. ಅರ್ಜುನ್ ಕಪೂರ್ ಅವರಿಗೆ 36 ವರ್ಷವಾದರೇ ಮಲೈಕಾ ಅರೋರಾ ಅವರಿಗೆ 48 ವರ್ಷ ವಯಸ್ಸಾಗಿದೆ. ಈ ಬಗ್ಗೆ ಮಲೈಕಾ ಸಿಕ್ಕಾಪಟ್ಟೆ ಟ್ರೋಲ್‌ಗೆ ಗುರಿಯಾಗಿದ್ದರು. ಆದರೂ ಯಾವುದಕ್ಕೂ ತಲೆಕೆಡಿಕೊಳ್ಳಲದ ಮಲೈಕಾಅರ್ಜುನ್ ಜೊತೆ ಪ್ರೀತಿಯಲ್ಲಿ ಮುಳುಗಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಜತೆ ಮಲೈಕಾ ಅವರ ಮದುವೆ 1998ರಲ್ಲಿ ಆಗಿತ್ತು. ಈ ದಂಪತಿಗೆ ಒಬ್ಬ ಮಗನಿದ್ದಾನೆ. ದಂಪತಿ 2017ರಲ್ಲಿ ಪ್ರತ್ಯೇಕವಾಗಿದ್ದಾರೆ. ಈ ನಡುವೆಯೇ ಅರ್ಜುನ್ ಕಪೂರ್ ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಮಲೈಕಾ. ಡೇಟಿಂಗ್ ಮುಗಿದು ಈಗ ಮದುವೆಯ ಬಂಧನಕ್ಕೆ ಬೀಳಲಿದ್ದಾರೆ ಎನ್ನಲಾಗುತ್ತಿದೆ. ಅರ್ಜುನ್ ಕಪೂರ್ಗೆ ಇದು ಮೊದಲ ಮದುವೆ. ಯಾವುದೇ ಆಡಂಬರವಿಲ್ಲದೇ ಸರಳವಾಗಿ ಮದುವೆಯಾಗುವುದಾಗಿ ಜೋಡಿ ಹೇಳಿಕೊಂಡಿದೆ.
PublicNext
18/05/2022 06:56 pm