‘ನಾನು ಮತ್ತು ಗುಂಡ’ ಸಿನಿಮಾದಲ್ಲಿ ಹೈಲೈಟ್ ಆಗಿದ್ದ ಸಿಂಬು ಎಂಬ ನಾಯಿ ಇನ್ನಿಲ್ಲ. ಹೌದು ಶಿವರಾಜ್ ಕೆ.ಆರ್ ಪೇಟೆ ನಟನೆಯ ಈ ಸಿನಿಮಾದಿಂದ ಸಿಂಬುಗೆ ಮತ್ತಷ್ಟು ಬೇಡಿಕೆ ಬಂತು. ಇದೀಗ ಆ ಸಿಂಬು ಇಹಲೋಕ ತ್ಯಜಿಸಿದೆ.
ತಮ್ಮೊಟ್ಟಿಗೆ ನಟಿಸಿದ್ದ ಸಿಂಬುನನ್ನು ಕಳೆದುಕೊಂಡಿರುವ ವಿಷಯವನ್ನು ನಟ ಶಿವರಾಜ್ ಕೆ.ಆರ್ ಪೇಟೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ‘ನಮ್ಮೊಂದಿಗೆ ಸಿಂಬು ನಟಿಸಿರಲಿಲ್ಲ. ಅದರೊಂದಿಗೆ ನಾವು ನಟಿಸಿದ್ದೆವು. ಅದರೊಂದಿಗಿನ ನಟನೆಯನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಸಿಂಬು ಇದೀಗ ಇಲ್ಲ ಎನ್ನುವ ಸುದ್ದಿ ಕೇಳಿ ತುಂಬಾ ನೋವಾಯಿತು ಎಂದು ಬರೆದುಕೊಂಡಿದ್ದಾರೆ.
ನಾನು ಮತ್ತು ಗುಂಡ ಸಿನಿಮಾದಲ್ಲಿ ಸಿಂಬು ನಟಿಸುವಾಗ ಅದಕ್ಕೆ ಎಂಟು ವರ್ಷ. ಸಿಂಬು ಲ್ಯಾಬ್ರಡರ್ ತಳಿಯದ್ದಾಗಿದ್ದು, ಅದಕ್ಕೆ ಸಿನಿಮಾದಲ್ಲಿ ನಟಿಸಲು ಸ್ವಾಮಿ ಅನ್ನುವವರು ತರಬೇತಿ ಕೂಡ ಕೊಟ್ಟಿದ್ದಾರೆ. ಹೀಗಾಗಿಯೇ ಹಲವು ಸಿನಿಮಾಗಳಲ್ಲಿ ಈ ಸಿಂಬು ಕಾಣಿಸಿಕೊಂಡಿದೆ. ಮತ್ತೊಂದು ಅಚ್ಚರಿಯ ಸಂಗತಿ ಅಂದರೆ, ನಾನು ಮತ್ತು ಗುಂಡ ಸಿನಿಮಾದಲ್ಲಿ ಈ ನಾಯಿ ಡಬ್ಬಿಂಗ್ ಕೂಡ ಮಾಡಿದೆ.
PublicNext
10/05/2022 11:36 am