ಮುಂಬೈ: ಬಾಲಿವುಡ್ ನಟ ಆಮಿರ್ ಖಾನ್ ಪುತ್ರಿ ಇರಾ ಖಾನ್ ಭಾನುವಾರ (ಮೇ 8) 25ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆಮಿರ್ ಖಾನ್ ತಮ್ಮ ಪುತ್ರಿಯ ಹುಟ್ಟುಹಬ್ಬವನ್ನು ಮಾಜಿ ಪತ್ನಿ ರೀನಾ ದತ್ತ ಅವರು ಜೊತೆಯಾಗಿ ಸೇರಿ ಆಚರಿಸಿದ್ದಾರೆ. ಆಮಿರ್ ಖಾನ್ ಎರಡನೇ ಪತ್ನಿ ಕಿರಣ್ ರಾವ್ ಅವರ ಪುತ್ರ ಆಜಾದ್ ಖಾನ್ ಕೂಡ ಇರಾ ಖಾನ್ ಜನ್ಮದಿನವನ್ನು ಸಂಭ್ರಮಿಸಿದ್ದಾನೆ.
ಎಲ್ಲರೂ ಒಟ್ಟಾಗಿ ಸೇರಿಕೊಂಡು ಸ್ವಿಮಿಂಗ್ ಪೂಲ್ ಸಮೀಪವೇ ಕೇಕ್ ಕತ್ತರಿಸಿದ್ದಾರೆ. ಈ ಸಂದರ್ಭದಲ್ಲಿ ಇರಾ ಖಾನ್ ಅವರು ಬಿಕಿನಿ ಧರಿಸಿದ್ದಾರೆ. ಆಮಿರ್ ಖಾನ್ ಹಾಗೂ ಆಜಾದ್ ಖಾನ್ ಸ್ವಿಮ್ಮಿಂಗ್ ಡ್ರೆಸ್ನಲ್ಲಿಯೇ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದನ್ನು ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. 'ಈ ಸಂದರ್ಭದಲ್ಲಾದರೂ ಸರಿಯಾಗಿ ಬಟ್ಟೆ ಧರಿಸಬೇಕಿತ್ತು' ಎಂದು ಅನೇಕ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
PublicNext
09/05/2022 12:53 pm