ಮುಂಬೈ: ಬಾಲಿವುಡ್ ನಟಿ ಸೋನಾಲಿ ಬೇಂದ್ರ ಈಗ ಒಂದು ಫೋಟೋ ಶೇರ್ ಮಾಡಿದ್ದಾರೆ. ಈ ಫೋಟೋದ ಹಿಂದೆ ಒಂದು ಕುತೂಹಲಕಾರಿ ಕಥೆನೂ ಇದೆ. ಆ ಕತೆಯ ಓಟ 16 ವರ್ಷ ಹಿಂದಕ್ಕೆ ಓಡುತ್ತದೆ.ಬನ್ನಿ, ಹೇಳ್ತಿವಿ.
ಈಗ ನೀವು ನೋಡಿರೋ ಫೋಟೋ ವಿಶೇಷವಾಗಿಯೇ ಇದೆ. ಹಾಲಿವುಡ್ ನ ಬಾಂಡ್ ಚಿತ್ರ ಖ್ಯಾತಿಯ ನಟ ಪಿಯರ್ಸ್ ಬ್ರಾಸ್ನನ್ ನಟಿ ಸೋನಾಲಿ ಬೇಂದ್ರೆ ಇಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಸೋನಾಲಿ ಬೇಂದ್ರೆ ಬಿಳಿ ಬಣ್ಣದ ಸಲ್ವಾನ್ ಧರಿಸಿಕೊಂಡಿದ್ದರು.
ಆದರೆ, ಈಗ ಅದೇ ಡ್ರೆಸ್ ಅನ್ನ 16 ವರ್ಷದ ಬಳಿಕ ಸೋನಾಲಿ ಬೇಂದ್ರೆ ಧರಿಸಿಕೊಂಡಿದ್ದಾರೆ.ಹುಮಾ ಖುರೇಷಿ ಈದ್ ಪಾರ್ಟಿಯಲ್ಲಿಯೇ ಸೋನಾಲಿ ಬೇಂದ್ರೆ ಮತ್ತೆ ಅದೇ ಉಡುಪನ್ನ ಧರಿಸಿಕೊಂಡು ಈಗ ಆ ಹಳೆ ದಿನಗಳನ್ನ ನೆನಪಿಸಿಕೊಂಡು ಖುಷಿಪಟ್ಟಿದ್ದಾರೆ.
PublicNext
06/05/2022 04:28 pm