ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಖಳನಾಯಕ ನಟ ಸೋನು ಸೂದ್ ಎಂಟ್ರಿಗೆ ದುಡ್ಡು ತೂರಿದ ಫ್ಯಾನ್ಸ್ !

ಹೈದ್ರಾಬಾದ್: ಬಾಲಿವುಡ್ ನ ಖಳನಾಯಕ ನಟ ಸೋನು ಸೂದ್ ನಿಜ ಜೀವನದಲ್ಲಿ ನಿಜಕ್ಕೂ ಹೀರೋನೆ. ಕೊರೊನಾ ಟೈಮ್ ನಲ್ಲಿ ಸೋನು ಮಾಡಿರೋ ಕೆಲಸ ಅಂತಿಂತ ಕೆಲಸ ಅಲ್ಲವೇ ಅಲ್ಲ. ಆ ಒಂದು ಕೆಲಸವೇ ಜನರ ಮನದಲ್ಲಿ ಈಗಲೂ ಒಂದ್ ಒಳ್ಳೆ ಜಾಗ ಮಾಡಿದೆ. ಅದಕ್ಕೆ ಇಲ್ಲಿದೆ ನೋಡಿ ಒಂದು ಸಾಕ್ಷಿ. ಬನ್ನಿ, ನೋಡೋಣ.

ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಆಚಾರ್ಯ ಚಿತ್ರ ರಿಲೀಸ್ ಆಗಿದೆ. ಚಿತ್ರವನ್ನ ಮೊದಲ ದಿನವೇ ವೀಕ್ಷಿಸಿದ ಪ್ರೇಕ್ಷಕರು ಸಖತ್ ಎಂಜಾಯ್ ಮಾಡಿದ್ದಾರೆ. ಆದರೆ, ಅದಕ್ಕೂ ಹೆಚ್ಚಾಗಿ, ಸೋನು ಸೋದ್ ಪಾತ್ರ ತೆರೆ ಮೇಲೆ ಬಂದಾಗ ದುಡ್ಡನ್ನ ಸ್ಕೀನ್ ಗೆ ತೂರಿ ಬಿಟ್ಟಿದ್ದಾರೆ.

ಈ ಒಂದು ದೃಶ್ಯದ ವೀಡಿಯೋವನ್ನ ಸ್ವತಃ ಸೋನು ಸೂದ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮೇಲೆ ಪ್ರೀತಿಯ ಮಳೆಯನ್ನೆ ಗೈದಿರೋ ತಮ್ಮ ಫ್ಯಾನ್ಸ್ ಗೆ ಸೋನು ಸೂದ್ ಧನ್ಯವಾದ ತಿಳಿಸಿದ್ದು, ನಿಮ್ಮ ಪ್ರೀತಿಗೆ ನಾನು ಅರ್ಹನಲ್ಲ. ಆದರೂ ನೀವು ನನ್ನ ಮೇಲೆ ಇಷ್ಟೊಂದು ಅಭಿಮಾನ ಇಟ್ಟುಕೊಂಡು ಸೆಲೆಬ್ರೇಟ್ ಮಾಡಿದ್ದೀರಿ. ಇದರಿಂದ ನಾನು ಇನ್ನಷ್ಟು ಮತ್ತಷ್ಟು ಒಳ್ಳೆ ಕೆಲಸ ಮಾಡಲು ಸ್ಪೂರ್ತಿ ಆಗುತ್ತದೆ ಅಂತಲೂ ಬರೆದುಕೊಂಡಿದ್ದಾರೆ.

Edited By :
PublicNext

PublicNext

30/04/2022 09:10 pm

Cinque Terre

206.27 K

Cinque Terre

7