ಮುಂಬೈ: ಸಿನಿಮಾರಂಗದಲ್ಲಿ ಈಗ ಭಾಷಾ ವಾರ್ ಜೋರ್ ಆಗಿಯೇ ಇದೆ. ಕಿಚ್ಚ ಸುದೀಪ್ ಹಿಂದಿ ಭಾಷೆ ರಾಷ್ಟ್ರೀಯ ಭಾಷೆ ಅಲ್ಲ ಅಂದಿದ್ದೇ ತಡ. ಬಾಲಿವುಡ್ ನಿಂದ ಅಜಯ್ ದೇವಗನ್ ರೊಚ್ಚಿಗೆದ್ದು ಎಲ್ಲರ ಕೆಂಗಣ್ಣಿಗೆ ಗುರಿ ಆದರು. ಆದರೆ, ಈಗ ಈ ಒಂದು ಭಾಷಾ ವಾರ್ ಗೆ ನಟಿ ಕಂಗನಾ ರಾಣಾವುತ್ ಎಂಟ್ರಿ ಕೊಟ್ಟಿದ್ದಾರೆ.
ಹೌದು. ಕಂಗನಾ ಕೂಡ ವಿವಾದಿತ ಹೇಳಿಕೆಗಳನ್ನ ಕೊಡುವಲ್ಲಿ ಎತ್ತಿದ ಕೈಗೆ ಅಂದರೆ, ಹಿಂದಿ ರಾಷ್ಟ್ರ ಭಾಷೆನೋ ಅಲ್ವೋ ಅನ್ನೋ ಚರ್ಚೆನೂ ನಡೀತಿದೆ. ಇದರ ಮಧ್ಯೆ ಕಂಗನಾ ತಮ್ಮದೇ ಶೈಲಿಯಲ್ಲಿ ಸಂಸ್ಕೃತ ರಾಷ್ಟ್ರೀಯ ಭಾಷೆ ಆಗಬೇಕು ಅಂತ ಹೇಳಿಕೆ ನೀಡಿದ್ದಾರೆ.
ತಮ್ಮ ಅಭಿನಯದ ದಢಕ್ ಚಿತ್ರದ ಪತ್ರಿಕಾಗೋಷ್ಠಿಯಲ್ಲಿಯೇ ಕಂಗನಾ ಮಾತನಾಡಿದ್ದು, ಸಂಸ್ಕೃತದಿಂದಲೇ ಇತರ ಭಾಷೆಗಳು ಹುಟ್ಟಿಕೊಂಡಿವೆ. ಕನ್ನಡ, ತಮಿಳು,ತೆಲುಗು,ಹೀಗೆ ಎಲ್ಲ ಭಾಷೆಗಳ ಮೂಲ ಸಂಸ್ಕೃತವೇ ಆಗಿದೆ. ಹಾಗಿದ್ದಾಗ ಯಾಕೆ ನಾವು ಸಂಸ್ಕೃತವನ್ನೇ ರಾಷ್ಟ್ರೀಯ ಭಾಷೆಯಾಗಿ ಇಟ್ಟುಕೊಳ್ಳಬಾರದು ಅಂತಲೇ ಕಂಗನಾ ಪ್ರಶ್ನೆ ಮಾಡಿ, ಎಲ್ಲರ ಗಮನ ಸೆಳೆದಿದ್ದಾರೆ.
PublicNext
30/04/2022 01:43 pm