ಹಿಂದಿ ರಾಷ್ಟ್ರಭಾಷೆ ಅಲ್ಲದಿದ್ದರೆ ನೀವೇಕೆ ಕನ್ನಡ ಚಿತ್ರವನ್ನು ಹಿಂದಿಗೆ ಡಬ್ ಮಾಡುತ್ತೀರಿ? ಎಂದು ಪ್ರಶ್ನಿಸಿದ ಅಜಯ್ ಗೆ ಪ್ರತ್ಯುತ್ತರ ನೀಡಿದ ಅಭಿನಯ ಚಕ್ರವರ್ತಿ ಸುದೀಪ್ ನೀವು ಹಿಂದಿಯಲ್ಲಿ ಮಾಡಿದ ಟ್ವೀಟ್ ನನಗೆ ಅರ್ಥ ಆಗಿದೆ. ಏಕೆಂದರೆ, ನಾವು ಹಿಂದಿಯನ್ನು ಪ್ರೀತಿಸುತ್ತೇವೆ, ಗೌರವಿಸುತ್ತೇವೆ. ಹಿಂದಿಯನ್ನು ಕಲಿತಿದ್ದೇವೆ.
ಅದೇ ರೀತಿ ನಾನು ನನ್ನ ಮಾತೃ ಭಾಷೆ ಕನ್ನಡದಲ್ಲಿ ಟೈಪ್ ಮಾಡಿ ಟ್ವೀಟ್ ಮಾಡಿದ್ರೆ ನಿಮ್ಮ ಪರಿಸ್ಥಿತಿಯೇನು..? ನನ್ನ ಹೇಳಿಕೆಯಲ್ಲಿ ಯಾವ ಅಪರಾಧವೂ ಇಲ್ಲ. ನಾವು ನಿಮ್ಮಂತೆ ಭಾರತಕ್ಕೆ ಸೇರಿಲ್ಲವೇ ಸಾರ್..? ಎಂದು ಅಜಯ್ ದೇವಗನ್ ಗೆ ಟಾಂಗ್ ಕೊಟ್ಟಿದ್ದಾರೆ.
ನಿರ್ದೇಶಕರುಗಳಾದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಮ್ ಗೋಪಾಲ್ ವರ್ಮಾ ಕಾಂಬಿನೇಷನ್ ಸಿನಿಮಾ ಟೈಟಲ್ ಲಾಂಚ್ ಇವೆಂಟ್ ಗೆ ಮುಖ್ಯ ಅತಿಥಿಗಳಾಗಿ ಕಾಣಿಸಿಕೊಂಡಿದ್ದ ಈ ವೇಳೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಕಿಚ್ಚ ಸುದೀಪ್, ಹಿಂದಿ ನಮ್ಮ ರಾಷ್ಟ್ರೀಯ ಭಾಷೆಯಾಗಿಲ್ಲ ಎಂದಿದ್ದರು.
PublicNext
27/04/2022 07:01 pm