ಮುಂಬೈ: ಬಾಲಿವುಡ್ ನ ಒಂದು ಕಾಲದ ನಾಯಕಿ ನಟಿ ರವೀನಾ ಟಂಡನ್ ಈಗ ಮತ್ತೆ ಕ್ರೇಜ್ ಹುಟ್ಟಿಸಿದ್ದಾರೆ. ಕನ್ನಡದ ಕೆಜಿಎಫ್-2 ಚಿತ್ರದ ರಮಿಕಾ ಸೇನ್ ಪಾತ್ರದ ಮೂಲಕ ಹುಚ್ಚು ಹಿಡಿಸಿದ್ದಾರೆ. ಬೆಳ್ಳಿ ತೆರೆ ಮೇಲೆ ರಮಿಕಾ ಸೇನ್ ಪಾತ್ರದ ಬಂದ ಕೂಡಲೇ ಫ್ಯಾನ್ಸ್ ದುಡ್ಡು ತೂರಿದ್ದಾರೆ.
ಹೌದು. ಈ ಒಂದು ದೃಶ್ಯದ ವೀಡಿಯೋವೊಂದನ್ನ ಸ್ವತಃ ರವೀನಾ ಟಂಡನ್ ತಮ್ಮ ಇನ್‌ಸ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.
ರವೀನಾ ಟಂಡನ್ ಈ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಉಪೇಂದ್ರ ಚಿತ್ರದಲ್ಲೂ ನಟಿಸಿದ್ದರು. ಆಗಲೂ ಇದೇ ರೀತಿ ಕ್ರೇಜ್ ಹುಟ್ಟಿಸಿದ್ದರು ರವೀನಾ ಟಂಡನ್. ಈಗ ಕೆಜಿಎಫ್-2 ಚಿತ್ರದ ಮೂಲಕ ಮತ್ತೆ ಕಿಚ್ಚು ಹಚ್ಚಿದ್ದಾರೆ.
PublicNext
20/04/2022 01:28 pm