ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣನ ಕೊನೆಯ ಚಿತ್ರಕ್ಕೆ ಧ್ವನಿಯಾದ ಧ್ರುವ

ಚಿರಂಜೀವಿ ಸರ್ಜಾ ನಮ್ಮನ್ನು ಅಗಲಿ ಎರಡು ವರ್ಷ ಕಳೆಯುತ್ತಾ ಬಂದಿದೆ. ಅವರ ನಟನೆಯ ಕೊನೆಯ ಚಿತ್ರ ‘ರಾಜಮಾರ್ತಾಂಡ’ ಸಿನಿಮಾ ಕೆಲಸಗಳು ಕಾರಣಾಂತರಗಳಿಂದ ವಿಳಂಬ ಆದವು.

ಈಗ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು ಚಿತ್ರದ ಡಬ್ಬಿಂಗ್ ಕೆಲಸ ಶುರುವಾಗಿದೆ. ಸದ್ಯ ಧ್ರುವ ಸರ್ಜಾ ಅವರು ಚಿರಂಜೀವಿ ಪಾತ್ರಕ್ಕೆ ಡಬ್ಬಿಂಗ್ ಮಾಡುತ್ತಿದ್ದಾರೆ. ಚಿರಂಜೀವಿ ಸರ್ಜಾ ಅವರು ಮೃತಪಟ್ಟು ಕೆಲವು ತಿಂಗಳು ಕಳೆದ ನಂತರದಲ್ಲಿ ರಾಯನ್ ಜನಿಸಿದ. ಈಗ ಸಿನಿಮಾದಲ್ಲಿ ರಾಯನ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ.

ರಾಮ್ ನಾರಾಯಣ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು ಸದ್ಯ ಪ್ರಮೋಷನ್ ಕಾರ್ಯಗಳಿಗೆ ಚಿತ್ರತಂಡ ಚಾಲನೆ ನೀಡಿದೆ. ಈ ವೇಳೆ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ.

Edited By : Nirmala Aralikatti
PublicNext

PublicNext

08/04/2022 08:12 pm

Cinque Terre

31.08 K

Cinque Terre

0