ತುಂಬು ಗರ್ಭಿಣಿಯಾದ ಬಹುಭಾಷಾ ನಟಿ ಸಂಜನಾ ಗಲ್ರಾನಿ 8 ತಮ್ಮ ತಾಯ್ತನದ ಖುಷಿಯನ್ನು ಹಂಚಿಕೊಂಡ ಬಳಿಕ ಈಗೊಂದು ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.
ಹೌದು ತಮ್ಮ ಇನ್ ಸ್ಟಾದಲ್ಲಿ ಬೋಳುತಲೆ ಫೋಟೋ ಶೇರ್ ಮಾಡಿಕೊಂಡ ನಟಿ ಸೌಂದರ್ಯವು ನೋಡುವವರ ದೃಷ್ಟಿಯಲ್ಲಿದೆ. ಅದಕ್ಕಾಗಿಯೇ ನಾನು ನನ್ನ ಕೂದಲನ್ನು ತ್ಯಾಗ ಮಾಡಿದ್ದೇನೆ. ನಾನು ದೇವರಿಗೆ ಯಾವ ರೀತಿ ನಮನ ಸಲ್ಲಿಸಬೇಕು ಎಂದು ನನಗೆ ತಿಳಿಯುತ್ತಿಲ್ಲ. ಹಲವಾರು ಕಷ್ಟಗಳನ್ನು ದಾಟಿದ ನಂತರ, ನನ್ನ ಜೀವನವು ಮತ್ತೊಮ್ಮೆ ಸುಂದರವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ನನ್ನ ಜೀವನದಲ್ಲಿ ತಾಯ್ತನದ ಹಂತ ಕೊಟ್ಟಿದ್ದಕ್ಕೆ ನಾನು ದೇವರಿಗೆ ಧನ್ಯವಾದ ಹೇಗೆ ಹೇಳಬೇಕು ಎಂದು ತಿಳಿಯುತ್ತಿಲ್ಲ. ನನ್ನ ಮಗು ನನ್ನ ಜೀವನದಲ್ಲಿ ಶೀಘ್ರದಲ್ಲೇ ಬರಲಿ ಎಂದು ನಾನು ನನ್ನ ಕೃತಜ್ಞತೆಯನ್ನು ಈ ರೀತಿ ವ್ಯಕ್ತಪಡಿಸಲು ಬಯಸುತ್ತೇನೆ. ಜೈ ಶ್ರೀ ಕೃಷ್ಣ, ಅಹಂ ಬ್ರಹ್ಮಾಷ್ಟಮಿ ಎಂದು ತಮ್ಮ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
PublicNext
04/04/2022 03:36 pm