ಬೆಂಗಳೂರು : ಆ್ಯಂಕರ್ ಅನುಶ್ರೀ ನನ್ನ ಮಗಳು ಎಂದು ವ್ಯಕ್ತಿಯೋರ್ವರು ಮಾಧ್ಯಮದ ಮುಂದೆ ಬಂದಿದ್ದಾರೆ. ನನ್ನ ಹೆಸರು ಸಂಪತ್ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದೇನೆ ನನ್ನ ಮಗಳು ಅನುಶ್ರಿ ಮತ್ತು ಮಗ ಅಭಿಜಿತ್ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಅವಳಿಗಾಗಿ ನಾನು ನನ್ನ ಜೀವನವನ್ನು ತ್ಯಾಗ ಮಾಡಿದ್ದೇನೆ.
ಅವಳು ಚೆನ್ನಾಗಿರಲಿ ಅಂತ ನಾನು ಯಾರಿಗೂ ಡಿಸ್ಟರ್ಬ್ ಮಾಡ್ಲಿಲ್ಲ. ಆದ್ರೆ ಈಗ ಕೊನೆಗಾಲದಲ್ಲಿ ನನ್ನ ಬಂದು ಒಂದು ಬಾರಿಯಾದ್ರೂ ನೋಡಲಿ ಎಂದಿದ್ದಾರೆ. ಇಲ್ಲವಾದರೆ ನಾನು ಸತ್ತಾಗ ನನ್ನ ಮೇಲೆ ಒಂದು ಹಿಡಿ ಮಣ್ಣು ಹಾಕಲಿ ಎಂದಿದ್ದಾರೆ. ಅವರ ಬಳಿಯಲ್ಲಿ ಸಾಕಷ್ಟು ಫೋಟೋಗಳು ಅವರ ಹೇಳಿಕೆಯನ್ನು ಸಮರ್ಥಿಸುವಂತಿದ್ದು, ನಿಜಕ್ಕೂ ಇವರು ಅನುಶ್ರೀ ತಂದೆಯಾ? ಅನ್ನೋ ಪ್ರಶ್ನೆ ಗಾಢವಾಗುವಂತಿದೆ.
ಸಂಪತ್ ಸದ್ಯ ಬೆಂ.ಉತ್ತರ ತಾಲ್ಲೂಕು ಮಾದನಾಯಕನಹಳ್ಳಿಯ ಅಭಯ ವಸಿಷ್ಠ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
PublicNext
31/03/2022 08:41 am