ಮುಂಬೈ: ಬಾಲಿವುಡ್ ನಟ ಆಮಿರ್ ಖಾನ್ ಸಿನಿಮಾರಂಗಕ್ಕೆ ಗುಡ್ ಬೈ ಹೇಳುವ ನಿರ್ಧಾರ ಮಾಡಿದ್ದ ಬಗ್ಗೆ ಬಹಿರಂಗ ಪಡಿಸಿ ಅಚ್ಚರಿ ಮೂಡಿಸಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಅಂದರೆ ಕೋವಿಡ್ ಸಮಯದಲ್ಲಿ ಆಮಿರ್ ಖಾನ್ ಸಿನಿಮಾರಂಗ ತೊರೆಯಲು ನಿರ್ಧರಿಸಿದ್ದರಂತೆ.
ಈ ಬಗ್ಗೆ ಮಾತನಾಡಿರುವ ಅವರು, 'ನಾನು ಸಿನಿಮಾರಂಗದಿಂದ ದೂರ ಸರಿಯುತ್ತೇನೆ. ಆದರೆ ಇದು ಯಾರಿಗೂ ತಿಳಿದಿಲ್ಲ. ನಾನು ಮೊದಲ ಬಾರಿಗೆ ಹೇಳುತ್ತಿದ್ದೇನೆ. ಇದು ನಿಮಗೆ ಶಾಕ್ ಎನಿಸಬಹುದು. ನಾನು ಇನ್ಮುಂದೆ ಯಾವುದೇ ಸಿನಿಮಾ ಮಾಡುವುದಿಲ್ಲ ಎಂದು ನನ್ನ ಮನೆಯವರಿಗೆ ತಿಳಿಸಿದ್ದೆ. ನಾನು ಯಾವುದೇ ಚಿತ್ರಗಳನ್ನು ನಿರ್ಮಿಸುವುದಿಲ್ಲ, ನಟಿಸುವುದಿಲ್ಲ ಇದ್ಯಾವುದನ್ನು ನಾನು ಮಾಡಲು ಬಯಸಲ್ಲ ಎಂದು ಹೇಳಿದ್ದೆ. ನಾನು ನಿಮ್ಮ ಜೊತೆ (ಕಿರಣ್ ಮತ್ತು ಅವಳ ಪೋಷಕರು, ನನ್ನ ಮಕ್ಕಳು, ಕುಟುಂಬದ) ಸಮಯ ಕಳೆಯಲು ಬಯಸುತ್ತೇನೆ ಎಂದು ಹೇಳಿದ್ದೆ. ಶಾಕ್ ಆದರು ಆದರೆ ಆಗ ಯಾರು ನನ್ನ ಜೊತೆ ವಾದ ಮಾಡಲಿಲ್ಲ. ಆಗ ನಾನು ಜನರಿಗೆ ತಿಳಿಸಿಬೇಕೆಂದುಕೊಂಡಿದ್ದೆ. ಆದರೆ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆಯಾಗಲಿರುವ ಕಾರಣ ತಿಳಿಸಿಲ್ಲ. ಇದೊಂದು ಮಾರ್ಕೆಟಿಂಕ್ ತಂತ್ರ ಎನ್ನುತ್ತಾರೆ ಕಾರಣಕ್ಕೆ ಬಹಿರಂಗ ಪಡಿಸಿಲ್ಲ' ಎಂದಿದ್ದಾರೆ.
'ಮೂರ್ನಾಲ್ಕು ವರ್ಷಗಳ ಬಳಿಕ ನನ್ನ ಸಿನಿಮಾ ಬರುತ್ತಿದೆ. ಲಾಲ್ ಸಿಂಗ್ ಚಡ್ಡಾ ಬಿಡುಗಡೆ ಬಳಿಕ ನಾನು ಏನು ಮಾಡುತ್ತೇನೆ ಎಂದು ಯಾರಿಗೂ ತಿಳಿದಿಲ್ಲ. ಅಷ್ಟರೊಳಗೆ ನಾನು ಚಿತ್ರರಂಗ ತೊರೆಯುತ್ತೇನೆ ಇದು ಯಾರಿಗೂ ಗೊತ್ತಾಗುವುದಿಲ್ಲ. ಹಾಗಾಗಿ ಏನನ್ನು ಹೇಳಬಾರದು ಎಂದು ನಿರ್ಧರಿಸಿ ಮೂರು ತಿಂಗಳು ಕಳೆಯಿತು. ಒಂದು ದಿನ ಮಕ್ಕಳು ನೀನು ತುಂಬಾ ಅತಿರೇಕದ ವ್ಯಕ್ತಿ, ಹೀಗೆ ಮಾಡಬೇಡಿ ಎಂದು ಹೇಳಿದರು. ಜೀವನದಲ್ಲಿ ಸಮತೋಲನವನ್ನು ಕಂಡುಕೊಳ್ಳಬೇಕು ಅದು ಉತ್ತಮ ಎಂದರು'
'ನನ್ನ ಹೃದಯದಲ್ಲಿ ನಾನು ಸಿನಿಮಾಗಳನ್ನು ತೊರೆದಿದ್ದೇನೆ. ನಾನು ತಪ್ಪು ಮಾಡುತ್ತಿದ್ದೇನೆ ಎಂದು ನನ್ನ ಮಕ್ಕಳು ಮತ್ತು ಕಿರಣ್ ನನಗೆ ವಿವರಿಸಿದರು. ಕಿರಣ್ ಅಳುತ್ತ ಹೇಳಿದಳು. ನಾನು ನಿನ್ನನ್ನು ನೋಡಿದಾಗ ನಿಮ್ಮೊಳಗೆ ವಾಸಿಸುವ ಚಲನಚಿತ್ರಗಳನ್ನು ನಾನು ನೋಡುತ್ತೇನೆ. ನೀವು ಈಗ ಏನು ಹೇಳುತ್ತಿದ್ದೀರಿ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಎರಡು ವರ್ಷಗಳಲ್ಲಿ ಏನೇನೋ ಆಗಿದೆ. ನಾನು ಚಿತ್ರರಂಗ ತೊರೆದು ಮತ್ತೆ ಬಂದಿದ್ದೇನೆ' ಎಂದಿದ್ದಾರೆ.
PublicNext
27/03/2022 10:28 pm