ಬೆಂಗಳೂರು: ಕನ್ನಡದ ಧಾರವಾಹಿ ಲೋಕದಲ್ಲಿ ಅನೇಕ ಧಾರವಾಹಿಗಳು ಬರುತ್ತವೆ. ಆದರೆ ಕೆಲವೇ ಕೆಲವು ಮಾತ್ರ ರಿಮೇಕ್ ಆಗುತ್ತವೆ. ಕನ್ನಡತಿ ಸೀರಿಯಲ್ ಈಗ ಮರಾಠಿ ಭಾಷೆಗೆ ರಿಮೇಕ್ ಆಗುತ್ತಿದೆ.
ಕನ್ನಡತಿ ಸೀರಿಯಲ್ ಸದ್ಯ ಪ್ರತಿಯೊಬ್ಬರ ಫೇವರಿಟ್ ಧಾರವಾಹಿ ಆಗಿದೆ. ಕನ್ನಡದ ಸೀರಿಯಲ್ ಗಳೂ ಪರ ಭಾಷೆಗೆ ಹೋಗುತ್ತಿರೋದು ವಿಶೇಷ.
ಅದರಂತೆ ಕನ್ನಡತಿ ಸೀರಿಯಲ್ ಮರಾಠಿ ಭಾಷೆಗೆ ರಿಮೇಕ್ ಆಗಿದೆ. 'ಭಾಗ್ಯದಿಲೆ ತೂ ಮಲ' ಹೆಸರಿನಲ್ಲಿಯೇ ಕನ್ನಡತಿ ಸೀರಿಯಲ್ ರಿಮೇಕ್ ಆಗಿದೆ. ಕನ್ನಡ ಸೀರಿಯಲ್ ಲೋಕದಲ್ಲಿ ಕನ್ನಡತಿಯ ಈ ಸಾಧನೆಯನ್ನ ಎಲ್ಲರೂ ಹೊಗಳುತ್ತಿದ್ದಾರೆ.
PublicNext
21/03/2022 05:40 pm