ಹೊಸದಿಲ್ಲಿ: ಭಾರತೀಯ ಚಿತ್ರರಂಗದಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ಹೊಸ ಸಂಚಲವನ್ನೆ ಹುಟ್ಟುಹಾಕಿದೆ. ಇಂತಹ ಈ ಸಿನಿಮಾ ರಾಜಕೀಯದಲ್ಲೂ ಕಿಚ್ಚು ಹಚ್ಚಿ ಬಿಟ್ಟಿದೆ. ಕೇವಲ ಹಿಂದಿ ಭಾಷೆಯಲ್ಲಿರೋ ಈ ಚಿತ್ರ ದಕ್ಷಿಣ ಭಾರತದ ಭಾಷೆಗಳಲ್ಲೂ ಡಬ್ ಆಗುತ್ತಿದೆ.
ಕಾಶ್ಮೀರಿ ಪಂಡಿತರ ಮೇಲೆ ಆದ ಆ ದುರಂತ ಕಥೆಯನ್ನೆ ಇಲ್ಲಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತೆರೆ ಮೇಲೆ ತಂದಿದ್ದಾರೆ. ನೇರಾ ನೇರವಾಗಿಯೇ ಅಲ್ಲಿ ಅಂದು ಏನೆಲ್ಲ ಆಗಿದೆ ಅನ್ನೋದನ್ನ ಇಲ್ಲಿ ಹೇಳಿದ್ದಾರೆ. ಆದರೆ ಎಲ್ಲವನ್ನೂ ಇಲ್ಲಿ ಅವರು ಹೇಳಿಲ್ಲ ಅನ್ನೋದು ಅಷ್ಟೇ ಸತ್ಯ.
ಇಂತಹ ಚಿತ್ರ ಎಲ್ಲ ಭಾಷೆಯಲ್ಲಿ ಬರಬೇಕು ಅನ್ನೋ ಹಿನ್ನೆಲೆಯಲ್ಲಿಯೇ ಚಿತ್ರ ತಂಡ ಕನ್ನಡ, ತೆಲುಗು,ತಮಿಳು ಭಾಷೆಗೂ ಡಬ್ಬಿಂಗ್ ಮಾಡಲು ಮುಂದಾಗಿದೆ. ಆದರೆ ಡಬ್ಬಿಂಗ್ ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ ಅನ್ನೋ ಡೇಟ್ ಇನ್ನೂ ಅನೌನ್ಸ್ ಆಗಿಲ್ಲ.ಬದಲಾಗಿ ಅದು ಬರೋವರೆಗೂ ಸಬ್ ಟೈಟಲ್ ನಲ್ಲಿಯೇ ಚಿತ್ರ ಪ್ರದರ್ಶನ ಕಾಣುತ್ತದೆ.
PublicNext
21/03/2022 10:22 am