ದಾವಣಗೆರೆ: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ರಾಜ್ಯದೆಲ್ಲೆಡೆ ನಾಡಹಬ್ಬದಂತೆ ಆಚರಿಸಲಾಗುತ್ತಿದೆ. ಬೆಣ್ಣೆನಗರಿ ದಾವಣಗೆರೆಯಲ್ಲೂ ಪುನೀತ್ ರಾಜ್‌ಕುಮಾರ್ ನಟನೆಯ ಜೇಮ್ಸ್ ಹವಾ ಜೋರಾಗಿದೆ. ದಿನದ ಎಲ್ಲಾ ಪ್ರದರ್ಶನಗಳ ಟಿಕೆಟ್ ಮಾರಾಟವಾಗಿದೆ.
ನಟ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದಂದೇ ಬಿಡುಗಡೆಯಾಗಿರುವ ಜೇಮ್ಸ್ ಚಿತ್ರ ನೋಡಲು ಬೆಳಿಗ್ಗೆ 6ಗಂಟೆಯಿಂದಲೇ ಅಪ್ಪು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ದಾವಣಗೆರೆಯ ವಸಂತ ಹಾಗೂ ಗೀತಾಂಜಲಿ ಸಿನಿಮಾ ಥಿಯೇಟರ್‌ಗಳ ಮುಂದೆ ಅಭಿಮಾನಿಗಳ ಸಾಗರವೇ ಹರಿದು ಬಂದಿತ್ತು. ಚಿತ್ರಮಂದಿರದ ಮುಂದೆಯೇ ಕೇಕ್ ಕತ್ತರಿಸಿ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಿದರು.
ಪುನೀತ್ ರಾಜಕುಮಾರ್ ಅವರ 47 ನೇ ಹುಟ್ಟುಹಬ್ಬ ಹಿನ್ನೆಲೆಯಲ್ಲಿ 47 ಆಟೋಗಳ ಮೇಲೆ ಪುನೀತ್ ಕಟೌಟ್ ನಿಲ್ಲಿಸಿ, ದೇವಸ್ಥಾನದಿಂದ ವಸಂತ ಚಿತ್ರ ಮಂದಿರದವರೆಗೆ ಅಭಿಮಾನಿಗಳು ಮೆರವಣಿಗೆ ಮಾಡಿದರು. ಚಿತ್ರಮಂದಿರದಲ್ಲಿ ಪುನೀತ್ ಕಟೌಟ್ ಗೆ ಹಾಲಿನ ಅಭಿಷೇಕ, ಪುಷ್ಪಾರ್ಚನೆ ಮಾಡಿ, ಕೇಕ್ ಕತ್ತರಿಸಲಾಯಿತು. ನಂತರ ಪ್ರೇಕ್ಷಕರಿಗೆ ಸಿಹಿ ವಿತರಿಸಲಾಯಿತು.
PublicNext
17/03/2022 04:41 pm