ಬೆಂಗಳೂರು : ರಾಜ್ಯಾದ್ಯಂತ ‘ಜೇಮ್ಸ್’ ಜಾತ್ರೆ ಆರಂಭವಾಗಿದ್ದು ಅಪ್ಪು ಅಭಿಮಾನಿಗಳು ಮೊದಲ ದಿನದ ಮೊದಲ ಶೋ ನೋಡಿ ಪುನೀತರಾಗಿದ್ದಾರೆ.
ನೆಚ್ಚಿನ ನಾಯಕ ಜೊತೆಗಿಲ್ಲ ಎನ್ನುವ ನೋವಿನ ಮಧ್ಯೆಯೂ ಅಭಿಮಾನಿ ದೇವರುಗಳು ಪುನೀತ ರಾಜಕುಮಾರ ಬರ್ತ ಡೇ ಆಚರಿಸಿ ಜೇಮ್ಸ್ ಸಿನಿಮಾ ವೀಕ್ಷಿಸಿ ನೋವಿನಲ್ಲಿಯೂ ನಗುತ್ತಿದ್ದಾರೆ.
ವಿಶ್ವದ 4 ಸಾವಿರಕ್ಕೂ ಹೆಚ್ಚು ಮಂದಿರಗಳಲ್ಲಿ ಜೇಮ್ಸ್ ಉತ್ತಮ ಪ್ರದರ್ಶನ ಕಾಣುತ್ತಿದೆ. ರಾಜ್ಯದಲ್ಲಿ ಪುನೀತ ಜಾತ್ರೆಯನ್ನೇ ಶುರುಮಾಡಿದ್ದಾರೆ. ಅನೇಕ ಚಿತ್ರಮಂದಿರಗಳು ಮದುವಣಗಿತ್ತಿಯಂತೆ ಅಲಂಕೃತಗೊಂಡಿದೆ. ಅಪ್ಪು ಕಟೌಟ್ ಗಳು ರಾರಾಜಿಸುತ್ತಿವೆ. ಯಾವ ಚಿತ್ರಮಂದಿರ ನೋಡಿದರೂ ಅಭಿಮಾನಿಗಳು ಮತ್ತು ಜನರು ಕಿಕ್ಕಿರಿದು ತುಂಬಿದ್ದಾರೆ.
ಪುನೀತ್ ಗೆ ಗೌರವ ಸೂಚಕವಾಗಿ ಇಂದು ಬೇರೆ ಯಾವ ಚಿತ್ರವನ್ನು ಬಿಡುಗಡೆ ಮಾಡಿಲ್ಲ. ಹೀಗಾಗಿ ರಾಜ್ಯದೆಲ್ಲೆಡೆ ಜೇಮ್ಸ್ ಜಾತ್ರೆ ಜೋರಾಗಿದೆ.
PublicNext
17/03/2022 08:01 am