ನವದೆಹಲಿ : ಪಂಡಿತರು, ಹಿಂದೂಗಳ ಮೇಲೆ ನಡೆದ ನರಮೇಧ ನೈಜ ಘಟನೆ ಆಧರಿಸಿದ ಚಿತ್ರ ದಿ ಕಾಶ್ಮೀರ ಫೈಲ್ಸ್ ಚಿತ್ರ ಆ ಕರಾಳ ದಿನಗಳನ್ನು ಮತ್ತೆ ನೆನಪಿಸಿದೆ. ಸದ್ಯ ಚಿತ್ರ ನೋಡಿದ ಬಳಿಕ ಕಾಶ್ಮೀರದ ಪೀಪಲ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯ ಕಾರ್ಯದರ್ಶಿ ಜಾವೇದ್ ಬೈಗ್ ಕಾಶ್ಮೀರಿ ಪಂಡಿತ್ ಕುಟುಂಬ ಗಿರಿಜಾ ಟಿಕೂ ಮೇಲೆ ನಡೆದ ಅತ್ಯಂತ ಘನಘೋರ ಘಟನೆಯನ್ನು ಹೇಳಿದ್ದಾರೆ.
ಅದು 1990. ಕಾಶ್ಮೀರ ಪಂಡಿತರ ನರಮೇಧ ನಡೆದ ಕರಾಳ ಅಧ್ಯಾಯ. ಪಂಡಿತರ ಕುಟುಂಬದ ಮಹಿಳೆಯರನ್ನು ಮನೆಯಿಂದ ಹೊರಗೆಳೆದು ಪತಿ, ತಂದೆ ಎದುರೇ ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿತ್ತು. ಹೀಗೆ ಪಂಡಿತರ ಕುಟುಂಬದಿಂದ ಗಿರಿಜಾ ಟಿಕೂ ಅನ್ನೋ ಹೆಣ್ಣುಮಗಳ ಹೊರಗೆಳೆದು ಜೀವಂತವಾಗಿಯೇ ತುಂಡು ತುಂಡಾಗಿ ಹತ್ಯೆಗೈದ ಘಟನೆ ಸತ್ಯ ಎಂದು ಜಾವೇದ್ ಬೈಗ್ ವಿವರಿಸಿದ್ದಾರೆ.
ಕಾಶ್ಮೀರ ಪಂಡಿತರ ನರಮೇಧ ಕಣ್ಣಾರೆ ನೋಡಿದ ಹಲವರು 32 ವರ್ಷಗಳ ಬಳಿಕ ಸತ್ಯ ಬಿಚ್ಚಿಡುತ್ತಿದ್ದಾರೆ. ಇಂತಹ ಅದೆಷ್ಟೋ ಸಾವಿರ ಘಟನೆಗಳು ನಡೆದಿದೆ. ಪಂಡಿತ್ ಕುಟುಂಬ ಹೆಣ್ಣು ಮಕ್ಕಳು, ಹಿಂದೂ ಕುಟುಂಬ ಹೆಣ್ಣುಮಕ್ಕಳು ಮುಸ್ಲಿಂ ಮತಾಂಧರ ಕೈಯಲ್ಲಿ ಸಿಲುಕಿ ನರಳಾಡಿದ್ದಾರೆ. ಈ ಸತ್ಯ ಕಾಶ್ಮೀರಿ ಫೈಲ್ಸ್ ಚಿತ್ರದ ಬಳಿಕ ಹೊರಬರುತ್ತಿದೆ.
PublicNext
16/03/2022 11:32 am