ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಲಾರ್ ಚಿತ್ರದ ಆ ಗುಟ್ಟು ಬಿಟ್ಟುಕೊಟ್ಟ ಡಾರ್ಲಿಂಗ್ ಪ್ರಭಾಸ್ ?

ಹೈದ್ರಾಬಾದ್: ಕೆಜಿಎಫ್ ಚಿತ್ರ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ಡಾರ್ಲಿಂಗ್ ಪ್ರಭಾಸ್ ಅಭಿನಯದ ಸಲಾರ್ ಚಿತ್ರ ಕೂಡ ಎರಡು ಭಾಗದಲ್ಲಿ ರಿಲೀಸ್ ಆಗುತ್ತದೆ ಅನ್ನೋ ಸುದ್ದಿ ಈಗ ಹರಿದಾಡುತ್ತಿದೆ.

ಮೊನ್ನೆ ರಾಧೆ ಶ್ಯಾಮ್ ಚಿತ್ರದ ಪ್ರೆಸ್ ಮೀಟ್‌ ನಲ್ಲಿ ಪ್ರಭಾಸ್ ಈ ಬಗ್ಗೆ ನೇರವಾಗಿಯೇ ರಿಯಾಕ್ಟ್ ಏನೂ ಮಾಡಿಲ್ಲ.ಆದರೆ, ಸಲಾರ್ ಎರಡು ಪಾರ್ಟ್‌ ನಲ್ಲಿ ಬರುತ್ತದೆ ಅನ್ನೋ ಪ್ರಶ್ನೆಗೆ, ಈಗ ಆ ವಿಷಯ ಬೇಡ ಅಂತಲೇ ಹೇಳಿ ಮಾತು ಮುಗಿಸಿದ್ದಾರೆ.

ಆದರೆ ಸಲಾರ್ ಎರಡು ಪಾರ್ಟ್‌ನಲ್ಲಿಯೇ ರಿಲೀಸ್ ಆಗುತ್ತದೆ ಅನ್ನೋ ಮಾತು ಹೆಚ್ಚು ಕೇಳಿ ಬರುತ್ತಿದೆ. ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಈ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಹರಿದಾಡುತ್ತಿರೋ ಈ ಸುದ್ದಿ ಈಗ ಕುತೂಹಲ ಮೂಡಿಸಿದೆ.

Edited By :
PublicNext

PublicNext

09/03/2022 10:21 am

Cinque Terre

20.15 K

Cinque Terre

0

ಸಂಬಂಧಿತ ಸುದ್ದಿ