ಮುಂಬೈ: ಓಪನ್ ಅಪ್ ಆಗಿ ಮಾತನಾಡುವ ಬಾಲಿವುಡ್ ನಟಿ ದೀಪಿಕಾ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ.
ಸದ್ಯ ಸಂದರ್ಶನವೊಂದರಲ್ಲಿ ನಿಮಗೆ ಒಳ್ಳೆಯ ಮತ್ತು ಕೆಟ್ಟ ಸಲಹೆಯನ್ನು ಯಾರಾದರೂ ನೀಡಿದ್ದಾರಾ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನನ್ನ 18 ನೇ ವಯಸ್ಸಿನಲ್ಲಿಯೇ ಬಾಡಿ ಶೇಮಿಂಗ್ ಆಗಿತ್ತು. ವ್ಯಕ್ತಿಯೊಬ್ಬರು ನನಗೆ ಸ್ತನವನ್ನು ಕಸಿ ಮಾಡಿಸಿಕೊಳ್ಳಲು ಸಲಹೆ ನೀಡಿದ್ದರು ಇದು ನನಗೆ ಕೊಟ್ಟ ಕೆಟ್ಟ ಸಲಹೆಯಾಗಿತ್ತು ಎಂದಿದ್ದಾರೆ.
ಇನ್ನು ಶಾರೂಖ್ ಖಾನ್ ನನಗೆ ಒಳ್ಳೆಯ ಸಲಹೆ ಕೊಟ್ಟಿದ್ದಾರೆ. 15 ವರ್ಷಗಳ ಹಿಂದೆ ನಾನು ಅವರೊಂದಿಗೆ ಸಿನಿಮಾ ಮಾಡಿದ್ದೆ. ಅವರು ನನಗೆ ಸಾಕಷ್ಟು ಒಳ್ಳೆಯ ಹಾಗೂ ಮೌಲ್ಯಯುತವಾದ ಸಲಹೆ ಕೊಟ್ಟಿದ್ದಾರೆ. ನಿಮಗೆ ಒಳ್ಳೆಯ ಸಮಯ ಬರುತ್ತದೆ, ಸಿನಿಮಾದಲ್ಲಿ ಗುರುತಿಸಿಕೊಳ್ಳುತ್ತೀರಿ, ಒಳ್ಳೆಯ ಕ್ಷಣಗಳನ್ನು ನೀವು ಅನುಭವಿಸುತ್ತೀರಿ ಎಂದು ಹೇಳಿದ್ದರು ಎಂದಿದ್ದಾರೆ.
ನನಗೆ ಸ್ತನ ಕಸಿ ಮಾಡಿಸಿಕೊಳ್ಳಲು ಹೇಳಿದವರ ಮಾತನ್ನು ನಾನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಹೇಳಿಕೊಂಡಿರುವುದು ಅಭಿಮಾನಿಗಳಿಗೆ ಆಶ್ಚರ್ಯವನ್ನುಂಟು ಮಾಡಿದೆ. ಇತ್ತೀಚೆಗೆ ದೀಪಿಕಾ ಪಡುಕೋಣೆ ಗೆಹ್ರೈಯಾನ್ ಸಿನಿಮಾದಲ್ಲಿ ನಟಿಸಿದ್ದಾರೆ.
PublicNext
28/02/2022 05:57 pm