ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪವರ್ ಸ್ಟಾರ್ ಪುನೀತ್ ಜೇಮ್ಸ್ ಚಿತ್ರದ ಪ್ರೀ ರಿಲೀಸ್ ಸಖತ್ ಪ್ಲಾನ್

ಬೆಂಗಳೂರು:ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರ ಅದ್ದೂರಿಯಾಗಿಯೇ ರಿಲೀಸ್‌ ಆಗುತ್ತಿದೆ. ಈ ಚಿತ್ರದ ಪ್ರೀ ರಿಲೀಸ್ ಇವೆಂಟ್ ಬರ್ಜರಿಯಾಗಿಯೇ ಪ್ಲಾನ್ ಆಗಿದೆ. ಬನ್ನಿ, ಹೇಳ್ತೀವಿ.

ಪುನೀತ್ ಆಸೆಯಂತೇನೆ ಮಾರ್ಚ್ 17 ರಂದು ಜೇಮ್ಸ್ ಸಿನಿಮಾ ರಿಲೀಸ್ ಆಗುತ್ತಿದೆ.ಕನ್ನಡಿಗರ ಈ ಸಿನಿಮಾ ತೆಲುಗು,ತಮಿಳು,ಹಿಂದಿ ಮತ್ತು ಮಲೆಯಾಳಂ ಭಾಷೆಯಲ್ಲೂ ತೆರೆ ಕಾಣುತ್ತಿದೆ.

ಹೌದು! ಈ ಚಿತ್ರದ ಪ್ರೀ ರಿಲೀಸ್ ಇವೆಂಟ್ ಸಖತ್ ಪ್ಲಾನ್ ಆಗಿದೆ.ಚೆನ್ನೈ, ಹೈದ್ರಾಬಾದ್, ಮುಂಬೈ,ಹೊಸ ಪೇಟೆ, ಚಾಮರಾಜನಗರ, ಹೀಗೆ ಹಲವಡೆ ಇವೆಂಟ್ ಪ್ಲಾನ್ ಆಗಿದೆ. ಮಾರ್ಚ್-6 ರಂದು ಚಿತ್ರದ ಮೊದಲ ಪ್ರೀ ರಿಲೀಸ್ ಇವೆಂಟ್ ಬಳ್ಳಾರಿಯ ಹೊಸಪೇಟೆಯಿಂದಲೇ ಶುರು ಆಗೋ ಚಾನ್ಸ್ ಇದೆ.

ಡೈರೆಕ್ಟರ್ ಬಹದ್ದೂರ್ ಚೇತನ್ ಕನಸಿನ ಈ ಸಿನಿಮಾ ಸದ್ಯ ಎಲ್ಲರಲ್ಲೂ ಭಾರಿ ನಿರೀಕ್ಷೆ ಹುಟ್ಟಿಸಿದೆ. ಪುನೀತ್ ಇಲ್ಲದೇ ಇರೋ ಕಾರಣಕ್ಕೆ ಚಿತ್ರ ಭಾವನಾತ್ಮಕವಾಗಿಯೇ ಪ್ರೇಕ್ಷಕರು ಹಾಗೂ ಅಭಿಮಾನಿಗಳಿಗೆ ಕನೆಕ್ಟ್ ಆಗಿ ಬಿಟ್ಟಿದೆ.

Edited By :
PublicNext

PublicNext

22/02/2022 10:06 am

Cinque Terre

54.96 K

Cinque Terre

0