ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹರ್ಷಾನಿಗೆ ಸಹಾಯ ಘೋಷಿಸಿದ ನಟ ಪ್ರಥಮ್

ಬೆಂಗಳೂರು: ಶಿವಮೊಗ್ಗದಲ್ಲಿ ಭಾನುವಾರ ರಾತ್ರಿ ಕಿಡಿಗೇಡಿಗಳಿಂದ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ಬಿಗ್​ಬಾಸ್​ ಖ್ಯಾತಿಯ ಪ್ರಥಮ್​ ಬೆಂಬಲವಾಗಿ ನಿಂತಿದ್ದಾರೆ.

ಪ್ರಥಮ್ ಅವರು ಹರ್ಷನ ಕುಟುಂಬಕ್ಕೆ 25 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಈ ಬಗ್ಗೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಥಮ್, "ನಾನು ಟಿವಿ, ಸೋಶಿಯಲ್​ ಮೀಡಿಯಾ ಅಷ್ಟಾಗಿ ಬಳಸದೇ ಇರುವುದರಿಂದ ಯಾವ ವಿಚಾರವೂ ಬೇಗ ತಲುಪುವುದಿಲ್ಲ. ನಿಜಕ್ಕೂ ಈ ವಿಚಾರ ಕೇಳಿ ಬಹಳ ನೋವಾಯ್ತು. ನನ್ನ ಹತ್ತಿರ ದುಡ್ಡಿದ್ದಿದ್ರೆ ಖಂಡಿತಾ ಇನ್ನಷ್ಟು ಪ್ರಯತ್ನ ಮಾಡುತ್ತಿದ್ದೆ. ಸರ್ಕಾರವನ್ನು ನಂಬಿಕೊಂಡು ಕೂರಬೇಡಿ. ದಯವಿಟ್ಟು ನೀವೆಲ್ಲರೂ ನಿಮ್ಮ ಕೈಲಾದಷ್ಟು ಹರ್ಷನ ಕುಟುಂಬಕ್ಕೆ ಸಹಾಯ ಮಾಡಿ" ಎಂದು ಕರೆ ನೀಡಿದ್ದಾರೆ.

Edited By : Vijay Kumar
PublicNext

PublicNext

22/02/2022 07:37 am

Cinque Terre

55.48 K

Cinque Terre

3