ಮುಂಬೈ: ಕಿಂಗ್ ಖಾನ್ ಶಾರುಖ್ ಅವರ ಹೊಸ ಲುಕ್ ಫೋಟೊವೊಂದು ಫ್ಯಾನ್ ಪೇಜ್ ನಲ್ಲಿ ವೈರಲ್ ಆಗಿದೆ. ಇದು ಯಾವ ಸಿನಿಮಾದ ಲುಕ್ ಎಂದು ಅಭಿಮಾನಿಗಳು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಫೋಟೋದಲ್ಲಿ ಶಾರೂಖ್ ಉದ್ದನೆಯ ಕೂದಲು ಮತ್ತು ಗಡ್ಡವನ್ನು ಬಿಟ್ಟುಕೊಂಡು ಕಪ್ಪು ಕೋಟ್ ಹಾಕಿ ನಿಂತಿದ್ದಾರೆ.
ಈ ಫೋಟೋಗೆ, ‘ಬಾದಷ್ ನ್ಯೂ ಲುಕ್’ ಎಂದು ಬರೆದು ಪೋಸ್ಟ್ ಮಾಡಲಾಗಿತ್ತು. ಈ ಫೋಟೋ ನೋಡಿದ ಅಭಿಮಾನಿಗಳು ಶಾರೂಖ್ ಹೊಸ ಲುಕ್ ನೋಡಿ ಫಿದಾ ಆಗಿದ್ದರು. ‘ಶಾರೂಖ್ ಯಾವಾಗಲೂ ಯಂಗ್’ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಇದು ಶಾರುಖ್ ಅವರ ಫೋಟೋಶಾಪ್ ಮಾಡಿದ ಫೋಟೋ. 2017ರಲ್ಲಿ ಡಬೂ ರತ್ನಾನಿ ಅವರು ಶಾರುಖ್ ಫೋಟೋಶೂಟ್ ಮಾಡಿದ್ದರು. ಈ ಫೋಟೋವನ್ನು ಬಳಕೆ ಮಾಡಿಕೊಂಡು ಯಾರೋ ಅಭಿಮಾನಿ ಎಡಿಟ್ ಮಾಡಿ ಹರಿಬಿಟ್ಟಿದ್ದಾರೆ. ಇದು ನೋಡೋಕೆ ಹೊಸ ಲುಕ್ ಮಾದರಿಯಲ್ಲಿದ್ದು ಕೆಲವರು ಶಾರುಖ್ ಅವರ ಈ ಲುಕ್ ಇಷ್ಟಪಟ್ಟಿದ್ದಾರೆ.
PublicNext
21/02/2022 08:56 pm