ಮುಂಬೈ: ಗ್ರೀಕ್ ಗಾಡ್ ಎಂದೇ ಕರೆಸಿಕೊಳ್ಳುವ ಬಾಲಿವುಡ್ ನಾಯಕ ಹೃತಿಕ್ ರೋಷನ್ ಮತ್ತೆ ಮದುವೆ ಆಗುತ್ತಿದ್ದಾರೆಯೇ ? ಗೊತ್ತಿಲ್ಲ. ಆದರೆ ಹೃತಿಕ್ ರೋಷನ್ ಗೆಳತಿ ಸಬಾ ಅಜಾದ್ ಭಾನುವಾರ ಹೃತಿಕ್ ಮನೆಗೆ ಬಂದು ಫ್ಯಾಮಿಲಿ ಮೆಂಬರ್ ಜೊತೆಗೆ ಕಾಲ ಕಳೆದಿದ್ದಾರೆ.
ಹೌದು! ಸಬಾ ಮತ್ತು ಹೃತಿಕ್ ಓಡಾಟ ಜೋರಾಗಿಯೇ ಇದೆ. ಸಾರ್ವಜನಿಕ ಪ್ರದೇಶದಲ್ಲೂ ಒಟ್ಟೊಟ್ಟಿಗೆ ಕಾಣಿಸಿಕೊಳ್ತಾರೆ. ಭಾನುವಾರ ಹೃತಿಕ್ ರೋಷನ್ ಚಿಕ್ಕಪ್ಪ ರಾಜೇಶ್ ರೋಷನ್ ಅವರ ಮನೆಯಲ್ಲಿಯೇ ಮಧ್ಯಾಹ್ನ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಈ ವಿಶೇಷ ಊಟದ ಸಮಯದಲ್ಲಿ ಸಬಾ ಕೂಡ ಜಾಯಿನ್ ಆಗಿದ್ದಾರೆ.
ಹೃತಿಕ್ ರೋಷನ್ ಫ್ಯಾಮಿಲಿ ಜೊತೆಗೆ ಊಟದ ಮಾಡಿದ ಬಳಿಕವೇ ಸಬಾ, ಸೋಷಿಯಲ್ ಮೀಡಿಯಾದಲ್ಲೂ ಇಡೀ ಫ್ಯಾಮಿಲಿ ಜೊತೆಗಿನ ಪೋಟೋ ಹಂಚಿಕೊಂಡಿದ್ದಾರೆ. 'ಬೆಸ್ಟೆಸ್ಟ್ ಸಂಡೆ' ಅಂತಲೂ ಬರೆದುಕೊಂಡಿದ್ದಾರೆ.
PublicNext
21/02/2022 01:48 pm