ಬಾಲಿವುಡ್‌ನ ಜನಪ್ರಿಯ ನಟಿ ಕಾಜೋಲ್ ಮುಂಬೈನ ಜುಹು ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಎರಡು ಫ್ಲಾಟ್‌ಗಳನ್ನು ಖರೀದಿಸಿದ್ದಾರೆ.
ವರದಿಯ ಪ್ರಕಾರ, ಮುಂಬೈನ ಜುಹುನಲ್ಲಿರುವ ಅನನ್ಯ ಬಿಲ್ಡಿಂಗ್‌ನಲ್ಲಿ ಎರಡು ಫ್ಲಾಟ್‌ಗಳನ್ನು ನಟಿ ಕಾಜೋಲ್ ಖರೀದಿಸಿದ್ದಾರೆ. ಅಪಾರ್ಟ್‌ಮೆಂಟ್‌ನ 10ನೇ ಮಹಡಿಯಲ್ಲಿರುವ ಎರಡು ಫ್ಲಾಟ್‌ಗಳನ್ನು ನಟಿ ಕಾಜೋಲ್ ತಮ್ಮದಾಗಿಸಿಕೊಂಡಿದ್ದಾರೆ. ಈ ಎರಡೂ ಪ್ರಾಪರ್ಟಿಯ ಒಟ್ಟು ಬೆಲೆ ಬರೋಬ್ಬರಿ 11.95 ಕೋಟಿ ರೂ. ಆಗಿದೆ.
ನಟಿ ಕಾಜೋಲ್ ಕಳೆದ ಜನವರಿ ತಿಂಗಳಿನಲ್ಲಿ ಈ ಎರಡು ಫ್ಲಾಟ್‌ಗಳನ್ನು ಖರೀದಿಸಿದ್ದರು. ಸುಮಾರು 2000 sq ft ಕಾರ್ಪೆಟ್ ಪ್ರದೇಶವನ್ನು ಎರಡೂ ಫ್ಲಾಟ್‌ಗಳು ಹೊಂದಿವೆ. ನಟಿ ಕಾಜೋಲ್ ಸದ್ಯ ನೆಲೆಸಿರುವ ಬಂಗಲೆಯ ಹತ್ತಿರದಲ್ಲೇ ಈ ಅಪಾರ್ಟ್‌ಮೆಂಟ್ ಇದೆ ಎನ್ನಲಾಗಿದೆ.
PublicNext
17/02/2022 10:52 pm