ಮುಂಬೈ:ಪುಟ್ಟ ಪರದೆಯಲ್ಲಿ ಶಕ್ತಿಮಾನ್ ಭಾರಿ ಸಂಚಲನ ಸೃಷ್ಟಿಸಿತ್ತು.90 ರ ದಶಕದಲ್ಲಿ ಈ ಸೀರಿಯಲ್ ಕಂಡ ಮಕ್ಕಳು ಶಕ್ತಿಮಾನ್ ರೀತಿನೇ ವರ್ತಿಸುತ್ತಿದ್ದರು. ಮಕ್ಕಳ ಮೇಲೆ ಅಷ್ಟು ಪ್ರಭಾವ ಬೀರಿದ್ದ ಈ ಸೀರಿಯಲ್ ಈಗ ಮತ್ತೆ ಬರುತ್ತಿದೆ. ಆದರೆ ಪುಟ್ಟ ಪರದೆ ಮೇಲೆ ಅಲ್ಲ. ಬಿಗ್ ಸ್ಕ್ರೀನ್ ಮೇಲೆ ಶಕ್ತಿಮಾನ್ ಬರ್ತಿದ್ದಾನೆ.
ಶಕ್ತಿಮಾನ್ ಪಾತ್ರದ ಮೂಲಕವೇ ನಟ ಮುಖೇಶ್ ಖನ್ನಾ ಮೋಡಿ ಮಾಡಿದ್ದರು.ಆದರೆ ಬಿಗ್ ಸ್ಕ್ರೀನ್ ಮೇಲೆ ಅದ್ಯಾರು ಶಕ್ತಿಮಾನ್ ಪಾತ್ರ ಮಾಡ್ತಿದ್ದಾರೆ ಅನ್ನೋ ಕುತೂಹಲವನ್ನ ಸಿನಿಮಾ ಮಂದಿ ಬಿಟ್ಟುಕೊಟ್ಟಿಲ್ಲ.
ಈಗ ರಿಲೀಸ್ ಮಾಡಿರೋ ಚಿತ್ರದ ಟೀಸರ್ ನಲ್ಲಿ ಕೇವಲ ಶಕ್ತಿಮಾನ್ ಡ್ರೆಸ್ ಮಾತ್ರ ಕಾಣಿಸುತ್ತಿದೆ. ಆ ಡ್ರೆಸ್ ತೊಡುವ ಹೀರೋ ಯಾರೂ ಅನ್ನೋದೇ ಈಗಿನ ಕುತೂಹಲ. ಇನ್ನು ಟ್ರೇಡ್ ವಿಶ್ಲೇಷಕ ತರಣ್ ಆದರ್ಶ ಈ ಚಿತ್ರದ ಟೀಸರ್ ಅನ್ನ ಟ್ವಿಟರ್ ನಲ್ಲಿ ಹಂಚಿಕೊಂಡು ಚಿತ್ರ ಬರ್ತಿದೆ ಅನ್ನೋದನ್ನ ಮಾತ್ರ ಈಗ ಹೇಳಿದ್ದಾರೆ.
PublicNext
11/02/2022 12:09 pm