ಬೆಂಗಳೂರು: ಮಳೆ ಹನಿ ನಿಂತರೂ ಮರದ ಹನಿ ನಿಲ್ಲೋದಿಲ್ಲವಂತೆ. ಹಾಗೇನೆ ಪುನೀತ್ ಇಲ್ಲದೇ ಇದ್ರೂ ಕೂಡ ಪುನೀತ್ ನೆನಪು ಜೀವಂತವಾಗಿಯೇ ಇದೆ.ಅದಕ್ಕೆ ಸಾಕ್ಷಿ ಎಂಬಂತೆ ಒಂದಿಲ್ಲ ಒಂದು ಕಾರಣಕ್ಕೆ ಪುನೀತ್ ನೆನಪಿಸೋ ಕಾರ್ಯಕ್ರಮ ನಡೀತಾನೆ ಇವೆ. ಅದರಂತೆ ಈಗ ಪುನೀತ್ ಮೇಲೆ ಒಂದು ಹಾಡೇ ರೆಡಿ ಆಗಿದೆ.
ಪುನೀತ್ ನಿಜಕ್ಕೂ ರಾಜಕುಮಾರನೇ ಸರಿ. ಪುನೀತ್ ನೆನೆದು ಕಂಬನಿ ಮಿಡಿಯದವರೇ ಇಲ್ಲ. ಅದೇ ರೀತಿ ಅವರನ್ನ ಮತ್ತೆ ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದೆ ಈ ಹಾಡು. ನಿಜ, ವಿ.ನಾಗೇಂದ್ರ ಪ್ರಸಾದ್ 'ಲಾಲಿ ಲಾಲಿ ಮಲಗು ರಾಜಕುಮಾರ' ಅನ್ನೋ ಹಾಡನ್ನ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿರೋ ಒಂದು ಹಾಡು ರಿಲೀಸ್ ಆಗಿದೆ.
ಇದನ್ನ ರಾಜೇಶ್ ಕೃಷ್ಣನ್ ಹಾಡಿದ್ದಾರೆ. ತುಂಬಾ ವಿಶೇಷವಾಗಿಯೇ ಇರೋ ಈ ಗೀತೆ ಎಲ್ಲರ ಹೃದಯ ತಟ್ಟಿ ಬಿಡುತ್ತದೆ. ಅದನ್ನ ನೀವು ನೋಡಿದ್ರೂ ಅಷ್ಟೆ. ಅಲ್ಲಿ ಪುನೀತ್ ನಿಮ್ಮ ಕಣ್ಣುಮುಂದೆ ಬಂದು ಒಂದು ಸುಂದರ ಕೊಟ್ಟು ಹೋದಂತೆ ಆಗುತ್ತದೆ.
PublicNext
02/02/2022 09:50 pm