ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲತಾ ಮಂಗೇಶ್ಕರ್ ಗಾಗಿ ದಿನದ ದುಡಿಮೆ ಮೀಸಲಿಟ್ಟ ಆಟೋ ಚಾಲಕ

ಮುಂಬೈ: ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಸದ್ಯ ಐಸಿಯುದಲ್ಲಿದ್ದಾರೆ. 92 ವರ್ಷದ ಲತಾ ಅವರು ಕೋವಿಡ್ ನಿಂದ ಬಳಲುತ್ತಿದ್ದಾರೆ. ಇವರ ಚಿಕಿತ್ಸೆಗಾಗಿಯೆ ಇಲ್ಲೊಬ್ಬ ಆಟೋ ಡ್ರೈವರ್ ತನ್ನ ದಿನದ ದುಡಿಮೆಯನ್ನ ಚಿಕಿತ್ಸೆಗೆ ಮೀಸಲಿಟ್ಟು ಅಭಿಮಾನ ಮೆರೆದಿದ್ದಾರೆ.

ಲತಾ ಮಂಗೇಶ್ಕರ್ ಅಂದ್ರೆ ಸಂಗೀತ ಕ್ಷೇತ್ರದ ಮಹಾನ್ ಚೇತನವೇ ಸರಿ.ಇವರ ಆರೋಗ್ಯ ಬೇಗ ಸುಧಾರಿಸಲಿ ಅಂತಲೇ ಅನೇಕರು ಬೇಡಿಕೊಳ್ಳುತ್ತಿದ್ದಾರೆ. ಹೀಗಿರೋವಾಗ ಲತಾಜೀ ಅವರ ಮಹಾನ್ ಅಭಿಮಾನಿ ಆಟೋ ಚಾಲಕ ಸತ್ಯವಾನ್ ಗೀತೆ ತಮ್ಮ ದಿನದ ದುಡಿಮೆಯನ್ನ ಲತಾ ಅವರ ಚಿಕಿತ್ಸೆಗೆ ಮೀಸಲಿಟ್ಟಿದ್ದಾರೆ.

ಅಂದ್ಹಾಗೆ ಈ ಆಟೋ ಚಾಲಕ ತಮ್ಮ ಆಟೋದ ತುಂಬೆಲ್ಲ ಲತಾ ಮಂಗೇಶ್ಕರ್ ಹಾಡಿರೋ ಹಾಡಿನ ಸಾಲುಗಳನ್ನ ಬರೆಸಿದ್ದಾರೆ. ಲತಾ ಅವರ ಭಾವಚಿತ್ರಗಳನ್ನೂ ಕೂಡ ಆಟೋದ ಒಳಗೆ ಮತ್ತು ಹೊರಗೆ ಕಾಣಬಹುದಾಗಿದೆ.

Edited By :
PublicNext

PublicNext

22/01/2022 07:02 pm

Cinque Terre

59.42 K

Cinque Terre

0