ಹೈದರಾಬಾದ್: ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್ ಮತ್ತು ಮಾಲಿವುಡ್ ನಲ್ಲಿ ನಡೆಯುವ ಕಾಸ್ಟಿಂಗ್ ಕೌಚ್ ಗೆ ಅನೇಕ ಕಲಾವಿದೆಯರು ಸಂತ್ರಸ್ತೆಯರಾಗಿದ್ದಾರೆ.
ಸಾಕಷ್ಟು ನಟಿಯರು ತಮ್ಮ ಕಹಿ ಅನುಭವಗಳನ್ನು ಧೈರ್ಯವಾಗಿ ಹೇಳಿಕೊಂಡಿದ್ದು, ಇದೀಗ ಆ ಸಾಲಿಗೆ ಒಡಿಶಾ ಮೂಲದ ನಟಿ ಅಪ್ಸರಾ ರಾಣಿ ಸೇರಿಕೊಂಡಿದ್ದಾರೆ.
ವಿವಾದಗಳಿಂದಲೇ ಸುದ್ದಿಯಾಗುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಅಪ್ಸರಾ ರಾಣಿಯನ್ನು ಸಿನಿ ಜಗತ್ತಿಗೆ ಪರಿಚಯಿಸಿದ್ದಾರೆ.
ನಟಿ ಕನ್ನಡದ ಸಿನಿಮಾ ಒಂದಕ್ಕೆ ನಾಯಕಿಯಾಗಿ ಅಪ್ಸರಾ ಆಯ್ಕೆಯಾಗಿದ್ದರಂತೆ. ನಿರ್ದೇಶಕರನ್ನು ಭೇಟಿಯಾಗಲು ತಮ್ಮ ತಂದೆಯೊಂದಿಗೆ ಹೋಗಿದ್ದಾಗ, ನಿಮಗೆ ಅವಕಾಶ ಬೇಕು ಅಂದ್ರೆ ನಮ್ಮ ಬಯಕೆಯನ್ನು ಈಡೇರಿಸಬೇಕು. ನಿಮ್ಮ ತಂದೆಯ ಜತೆ ಬರದೇ ಒಬ್ಬರೇ ಬನ್ನಿ ಎಂದು ಹೇಳಿದ್ದರಂತೆ.
ನಿರ್ದೇಶಕರು ಹೇಳಿದ್ದನ್ನು ಅರ್ಥ ಮಾಡಿಕೊಂಡ ಅಪ್ಸರಾ ಅಲ್ಲಿಂದ ವಾಪಸ್ ತಮ್ಮ ಮನೆಗೆ ಹಿಂದಿರುಗಿದರಂತೆ. ಆದರೆ, ಆ ನಿರ್ದೇಶಕ ಯಾರೆಂಬುದನ್ನು ಆಕೆ ಬಹಿರಂಗಪಡಿಸಿಲ್ಲ.
ತೆಲುಗು ಚಿತ್ರರಂಗದಲ್ಲಿ ಎಂದಿಗೂ ಇಂತಹ ಕಹಿ ಅನುಭವವನ್ನು ನಾನು ಹೊಂದಿಲ್ಲ. ಇಲ್ಲಿ ಪ್ರತಿಭೆ ಇದ್ದವರಿಗೆ ಮಾತ್ರ ಅವಕಾಶ ಸಿಗುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ಕನ್ನಡ ಚಿತ್ರರಂಗವನ್ನು ದೂರಿದ್ದಾರೆ.
ಅದೇನೆ ಇರಲಿ ಒಬ್ಬರ ತಪ್ಪಿಗೆ ಇಡೀ ಕನ್ನಡ ಇಂಡಸ್ಟ್ರಿಯ ವಿರುದ್ಧ ಅಪ್ಸರಾ ಗಂಭೀರ ಆರೋಪ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಕೆಲವರ ಪ್ರಶ್ನೆ
PublicNext
19/01/2022 03:37 pm