ಬಿಗ್ ಬಾಸ್‌ನಲ್ಲಿ ಕೇಳ್ತಿದ್ದ ಧ್ವನಿ ಬಡೆಕ್ಕಿಲ ಪ್ರದೀಪ್‌ದೇ ಅನ್ನೋದು ಎಲ್ರಿಗೂ ಗೊತ್ತು.. ಆದ್ರೆ ವಾಯ್ಸ್ ಓವರ್ ಆರ್ಟಿಸ್ಟ್ ಆಗಿ ಬೆಂಗಳೂರಿನಲ್ಲಿದ್ದ ಪ್ರದೀಪ್ ಕಳೆದ ಒಂದು ವರ್ಷದಿಂದ ಮಂಗಳೂರಲ್ಲೇ ಸೆಟಲ್ ಆಗ್ಬಿಟ್ಟಿದ್ದಾರೆ. ತೋಟದಲ್ಲಿ ಕೆಲಸ ಮಾಡಿಕೊಂಡು ಹಳ್ಳಿಯಲ್ಲಿ ಹಾಯಾಗಿ ಜೀವನ ನಡೆಸುತ್ತಿದ್ದಾರೆ.
ಆದ್ರೂ ಇವರಿಗೆ ಅವಕಾಶಗಳ ಕೊರತೆ ಏನೂ ಇಲ್ಲ. ಬಾಲಿವುಡ್ ಜಾಹೀರಾತುಗಳಿಂದ ಹಿಡಿದು ಸಿನಿಮಾಗಳಿಗೆ ವಾಯ್ಸ್ ಕೂಡ ಕೊಡ್ತಿದ್ದಾರೆ. ಸದ್ಯ ಹತ್ತು ಹಲವು ಪ್ರಾಜೆಕ್ಟ್‌ಗಳು ಪ್ರದೀಪ್ ಕೈಯಲ್ಲಿದೆ. ಪ್ರದೀಪ್ ವಾಯ್ಸ್ ಓವರ್ ಆರ್ಟಿಸ್ಟ್ ಆಗಿ ಸಕ್ಸಸ್ ಕಂಡುಕೊಂಡಿದ್ದಾರೆ ನಿಜ. ಆದ್ರೆ ಫ್ಯೂಚರ್‌ನಲ್ಲಿ ವಾಯ್ಸ್ ಓವರ್ ಆರ್ಟಿಸ್ಟ್ ಆಗಿ ಬರೋ ಮಂದಿಗೆ ಈ ಫೀಲ್ಡ್ ಡೀಲ್ ಮಾಡೋದು ಎಷ್ಟು ಕಷ್ಟ ಅನ್ನೋದನ್ನು ನಮ್ಮ ಪಬ್ಲಿಕ್ ನೆಕ್ಸ್ಟ್ ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ಮುಂದೆ ಮನಬಿಚ್ಚಿ ಮಾತನಾಡಿದ್ದಾರೆ ನೋಡಿ.
PublicNext
19/01/2022 01:54 pm