ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಟಿ ಕಂಗನಾಗೆ ನೆಟ್ಟಿಗರಿಂದ ಹಿಗ್ಗಾಮುಗ್ಗಾ ಕ್ಲಾಸ್- ಯಾಕೆ ಗೊತ್ತಾ?

ಮುಂಬೈ: ಬಾಲಿವುಡ್‌ ನಟಿ ಕಂಗನಾ ರಣಾವತ್ ಅವರಿಗೆ ಹಾಗೂ ಕಾಂಟ್ರವರ್ಸಿಗೂ ಎಲ್ಲಿಲ್ಲದ ನಂಟು.​ ಕಂಡವರ ತಪ್ಪನ್ನು ಎತ್ತಿ ಹೇಳುವಲ್ಲಿ ಕಂಗನಾ ಸದಾ ಮುಂದಿರುತ್ತಾರೆ. ಆದರೆ ಈಗ ಅವರೇ ಒಂದು ತಪ್ಪು ಮಾಡಿ ಪೇಚಿಗೆ ಸಿಲುಕಿದ್ದಾರೆ.

ಹೌದು. ಇತ್ತೀಚೆಗೆ ಕಂಗನಾ ಅವರು ಒಂದು ರೆಸ್ಟೋರೆಂಟ್​ಗೆ ತೆರಳಿದ್ದಾರೆ. ಅಲ್ಲಿ ವೇಟರ್ ಕೈಯಲ್ಲಿದ್ದ ಹಲವು ಕೇಕ್​ ಪೀಸ್​ಗಳ ಪೈಕಿ ಒಂದನ್ನು ಎತ್ತಿಕೊಂಡು ಬಾಯಿಯ ಹತ್ತಿರಕ್ಕೆ ತಂದು ತಿನ್ನುವಂತೆ ಫೋಟೋಗೆ ಪೋಸ್ ಕೊಡುತ್ತಾರೆ. ನಂತರ ಅದೇ ಕೇಕ್​ ಅನ್ನು ವಾಪಸ್ ಟ್ರೇನಲ್ಲಿ​ ಇಟ್ಟಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಕ್ಯಾಮೆರದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಈ ವಿಡಿಯೋ ಕಂಡು ಜನರು ಕೆಂಡಾಮಂಡಲ ಆಗಿದ್ದಾರೆ. ಕೇಕ್​ ಅನ್ನು ಬಾಯಿಯ ಹತ್ತಿರಕ್ಕೆ ತಂದು, ತಿನ್ನುವಂತೆ ನಟಿಸಿದ ಬಳಿಕ ವಾಪಸ್​ ಇಟ್ಟಿರುವುದರಿಂದ ವೈರಸ್​ ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಕಂಗನಾ ಈ ರೀತಿ ಮಾಡಿದ್ದು ತಪ್ಪು ಎಂದು ನೆಟ್ಟಿಗರು ಖಾರವಾಗಿ ಕಮೆಂಟ್​ ಮಾಡುತ್ತಿದ್ದಾರೆ.

Edited By : Vijay Kumar
PublicNext

PublicNext

08/01/2022 06:22 pm

Cinque Terre

78.16 K

Cinque Terre

14