ಶಿವಮೊಗ್ಗ:ಕನ್ನಡದ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಏಕ್ ಲವ್ ಯಾ ಚಿತ್ರದಲ್ಲಿ ಬೋಲ್ಡ್ ಪಾತ್ರವನ್ನೇ ಮಾಡಿದ್ದಾರೆ. ಅದಕ್ಕೆ ಸೂಕ್ತ ಅನ್ನೋ ರೀತಿಯಲ್ಲಿಯೇ ಸಿಗರೇಟ್ ಕೂಡ ಸೇದಿದ್ದಾರೆ.ಶಿವಮೊಗ್ಗದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ರಚಿತಾ ರಾಮ್ ಏನ್ ಹೇಳಿದ್ರು ಗೊತ್ತೇ ಬನ್ನಿ ಹೇಳ್ತೀವಿ.
ಹೌದು.ರಚಿತಾ ಚಿತ್ರದಲ್ಲಿ ಸಿಗರೇಟ್ ಸೇದಿರೋ ಬಗ್ಗೆ ಮಾತನಾಡಿದ್ದಾರೆ. ಚಿತ್ರದ ಪಾತ್ರಕ್ಕಾಗಿಯೇ ಸಿಗರೇಟ್ ಸೇದಿದ್ದೇನೆ. ಸುಮ್ನೆ ಕಾರಣವಿಲ್ಲದೇ ಬೋಲ್ಡ್ ಆಗಿ ಕಾಣಲು ಈ ಕೆಲಸ ಮಾಡಿಯೇ ಇಲ್ಲ. ಚಿತ್ರ ತೆರೆ ಮೇಲೆ ಬಂದ್ಮೇಲೆ ನಾನು ಯಾಕೆ ಸಿಗರೇಟ್ ಸೇದಿದೆ ಅಂತ ನಿಮಗೆಲ್ಲ ತಿಳಿಯುತ್ತದೆ ಅಂತಲೂ ರಚಿತಾ ರಾಮ್ ಖಡಕ್ ಆಗಿಯೇ ಉತ್ತರ ಕೊಟ್ಟಿದ್ದಾರೆ.
PublicNext
27/12/2021 11:50 am