ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್,ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಗೆ ಹಾವು ಕಚ್ಚಿದೆ. ಆದರೆ ಸಲ್ಮಾನ್ ಸೇಫ್ ಆಗಿದ್ದಾರೆ. ಏನೂ ತೊಂದರೆ ಇಲ್ಲ ಅಂತಿದೆ ಮೂಲಗಳು.
ಹೌದು ಸಲ್ಮಾನ್ ಖಾನ್ ಗೆ ನಿನ್ನೆ ರಾತ್ರಿ ಅವರ ಪನ್ವೇಲ್‌ನಲ್ಲಿರೋ ಫಾರ್ಮ್ ಹೌಸ್‌ನಲ್ಲಿ ಹಾವು ಕಚ್ಚಿದೆ. ತಕ್ಷಣವೇ ನವಿ ಮುಂಬೈನ ಎಂಜಿಎಂ ಆಸ್ಪತ್ರೆಗೂ ಸಲ್ಮಾನ್ ರನ್ನ ದಾಖಲಾಗಿಸಲಾಗಿದೆ.
ಆದರೆ ಸಲ್ಮಾನ್ ಗೆ ಕಚ್ಚಿದ ಹಾವು ವಿಷರಹಿತ ಹಾವಾಗಿದೆ. ಅದಕ್ಕೇನೆ ಸಲ್ಮಾನ್ ಸೇಫ್ ಆಗಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೂ ಬಂದಿದ್ದಾರೆ.
PublicNext
26/12/2021 01:35 pm